ನೆಲಮಂಗಲ: ಬಿಜೆಪಿಯಲ್ಲಿ ಭಿನ್ನ ಮತ ಸ್ಟೋಟ


16-01-2018 1407

ನೆಲಮಂಗಲ: ಬೆಂಗಳೂರು ಗ್ರಾಮಾಂತರ ನೆಲಮಂಗಲದಲ್ಲಿ ನಡೆಯಬೇಕಿದ್ದ ಪರಿವರ್ತನಾ ಯಾತ್ರೆಗೂ ಮೊದಲೇ ನೆಲಮಂಗಲದ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಗಲಾಟೆ ಪ್ರಾರಂಭವಾಗಿ ಮಾತಿನ ಚಕಮಕಿ ನಡೆದಿದ್ದು, ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ನೆಲಮಂಗಲ ಪಟ್ಟಣದಲ್ಲಿ ಇಂದು ಸಂಜೆ ಪರಿವರ್ತನಾ ಯಾತ್ರೆ ಕಾರ್ಯಕ್ರಮ ನಡೆಯಲಿದ್ದು, ಪರಿವರ್ತನಾ ಯಾತ್ರೆಗೆ ಫ್ಲೆಕ್ಸ್ ಕಟ್ಟುವ ವೇಳೆ ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಾಜಿ ಶಾಸಕ ನಾಗರಾಜು ಹಾಗೂ ಹೊಂಬಯ್ಯ ನಡುವೆ ಮಾತಿನ ಚಕಮಕಿ ನಡೆಯಿತು. ಹೊಂಬಯ್ಯ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ನೆಲಮಂಗಲದ ಬಸವಣ್ಣದೇವರ ಮಠದ ಆವರಣದಲ್ಲಿ ಇಂದು ಸಂಜೆ  ಪರಿವರ್ತನ ಯಾತ್ರೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಬಿಎಸ್ವೈ ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಲಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

parivarthana yatre nelamangala ಆಕಾಂಕ್ಷಿ ಪರಿವರ್ತನಾ