‘ಪಾಲೇಕರ್ ಗೆ ಮಂತ್ರಿ ಸ್ಥಾನದ ಅರಿವಿಲ್ಲ’


15-01-2018 587

ಬೆಳಗಾವಿ: ಗೋವಾ ನೀರಾವರಿ ಸಚಿವರಿಂದ ಕನ್ನಡಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಈ ಕುರಿತಂತೆ ಬೆಳಗಾವಿಯಲ್ಲಿಂದು ಮಾತನಾಡಿದ ಸಹಕಾರ ಸಚಿವ ರಮೇಶ ಜಾರಕಿಹೋಳಿ, ನಾವೆಲ್ಲಾ ಮೊದಲು ಭಾರತೀಯರು, ನೀರಿನ ಹೆಸರಿನಲ್ಲಿ ರಾಜಕೀಯ ಮಾಡುವಂತಹ ಮೂರ್ಖತನ ನಮಗೆ ಬಂದಿಲ್ಲ ಎಂದು ಗೋವಾ ಸಚಿವರ ವಿರುದ್ಧ ಕಿಡಿಕಾರಿದರು. ಯಡಿಯೂರಪ್ಪ ಹತಾಶೆಯಿಂದ ಮಹದಾಯಿ ವಿಚಾರಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಗೋವಾ ನೀರಾವರಿ ಸಚಿವ ಪಾಲೇಕರ್ ಗೆ ಮಂತ್ರಿ ಹಾಗೂ ಶಾಸಕ ಸ್ಥಾನದ ಅರಿವಿಲ್ಲ. ಕನ್ನಡಿಗರು ನಾವು ಯಾರಿಗೂ ದ್ರೋಹ ಮಾಡುವುದಿಲ್ಲ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

vinod palekar irrigation ಅವಹೇಳನ ಹತಾಶೆ