ಗೋವಾ ಸಚಿವ ಭಾವಚಿತ್ರಕ್ಕೆ ಬೆಂಕಿ


15-01-2018 603

ವಿಜಯಪುರ: ಕನ್ನಡಿಗರ ಕುರಿತು ಗೋವಾ ಜಲಸಂಪನ್ಮೂಲ ಸಚಿವ ಅವಹೇಳನಕಾರಿ ಹೇಳಿಕೆ ಖಂಡಿಸಿ, ವಿಜಯಪುರದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸಚಿವ ವಿನೋದ ಪಾಲೇಕರ್ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಗಾಂಧಿ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿರುವ ಪ್ರತಿಭಟನಾಕಾರರು, ಗೋವಾ ಸಚಿವ ಪಾಲೇಕರ್ ಅವರ ಭಾವ ಚಿತ್ರಕ್ಕೆ ಆಯಿಲ್ ಸುರಿದು, ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ. ಕೂಡಲೆ ತಮ್ಮ ಹೇಳಿಕೆಗೆ ವಾಪಸ್ ಪಡೆದು ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

vinod palekar goa ಭಾವಚಿತ್ರ ಆಕ್ರೋಶ