ಮನೆ ದೇವರ ಹೆಸರಲ್ಲಿ 101 ಕುರಿಗಳ ಬಲಿ


21-04-2017 399

ರಾಯಚೂರು : ರಾಯಚೂರು ಜಿಲ್ಲೆಯ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲರಿಂದ ತಮ್ಮ ಮನೆದೇವರಿಗೆ 101 ಕುರಿಗಳನ್ನು ಬಲಿ ನೀಡಲಾಗಿದೆ . ಇಂದು ನಸುಕಿನವೇಳೆ ನಡೆದ ಈ ಮಾರಣ ಹೋಮ ಬಳಿಕ ಭಾರಿ ಪ್ರಮಾಣದ ಭೋಜನ ತಯಾರಿ ನಡೆಸಿದ್ದಾರೆ. ಪ್ರಾಣಿ ಬಲಿ ಕೊಡಲು ಶಾಸಕ ಮಾನಪ್ಪ ವಜ್ಜಲ್ ಹಾಗೂ ಅವರ ಸಹೋದರರ ಹರಕೆ ಕಾರಣ ಎನ್ನಲಾಗಿದೆ.     ಲಿಂಗಸುಗೂರ ಕ್ಷೇತ್ರದ ಜೆಡಿಎಸ್ ಶಾಸಕ ಮಾನಪ್ಪ ಡಿ.ವಜ್ಜಲ್ ಅವರು ಲಿಂಗಸಗೂರು ಸಮೀಪದ ಗೆಜ್ಜಲಗಟ್ಟಾ ಗ್ರಾಮದಲ್ಲಿರುವ ತಮ್ಮ ಮನೆ ದೇವರು ವೀರ ನಾಗಮ್ಮನ ಹೆಸರಲ್ಲಿ 101  ಕುರಿಗಳನ್ನು ಬಲಿ ನೀಡಿದ್ದಾರೆ ಎನ್ನಲಾಗಿದೆ. ದೇವರ ಹೆಸರಲ್ಲಿ ನಡೆದ ಈ ಕುರಿ ಬಲಿ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Links :