ಪಾಸ್ ಬುಕ್‌ ಎಂಟ್ರಿಗೆ ಕಾಸು?


12-01-2018 1347

ಈ ಸುದ್ದಿ ಕೇಳಿದ್ರೆ ಇದೆಂಥ ಕಾಲ ಬಂತಪ್ಪಾ ಅಂತೀರಿ. ಏನಪ್ಪಾ ಅದು ಅಂದ್ರೆ, ನೋಡಿ, ಇದೀಗ ಬ್ಯಾಂಕ್‌ನೋರು ಪಾಸ್‌ಬುಕ್ ಎಂಟ್ರಿ ಮಾಡಿಕೊಡೋಕ್ಕೆ ಕಾಸು ಕೀಳೋ ಪ್ಲಾನ್ ಮಾಡಿದ್ರಂತೆ.  ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯದವರು, ಗ್ರಾಹಕರಿಗೆ ನೀಡುವ ಹಲವು ಸೇವೆಗಳಿಗೆ ಶುಲ್ಕ ವಿಧಿಸೋ ಸೂಚನೆ ನೀಡಿದ್ದರು. ಇದು, ಇದೇ ಜನವರಿ 20ರಿಂದ ಜಾರಿಗೆ ಬರುತ್ತದೆ ಎಂದು ಆ ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಹಾಕಲಾಗಿತ್ತು. ಪ್ರತಿ ಬಾರಿ, ನೀವು ಪಾಸ್ ಬುಕ್ ಪ್ರಿಂಟ್ ಮಾಡಿಸಿದಾಗಲೂ ನಿಮ್ಮ ಖಾತೆಯಿಂದ 10 ರೂಪಾಯಿ ಕಡಿತ ಮತ್ತು, ಈವರೆಗೆ ಉಚಿತವಾಗಿದ್ದ ಹಲವು ಸೇವೆಗಳಿಗೂ ಇನ್ನು ಮುಂದೆ ಹಣ ನೀಡಬೇಕಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ಇವುಗಳಲ್ಲಿ ಕ್ಯಾಶ್ ತೆಗೆದುಕೊಳ್ಳುವುದು, ಕ್ಯಾಶ್‌ ಮತ್ತು ಚೆಕ್  ಡಿಪಾಸಿಟ್ ಮಾಡುವುದು, ಬ್ಯಾಲೆನ್ಸ್ ಸ್ಟೇಟ್‌ಮೆಂಟ್, ಸಹಿ ಮತ್ತು ಫೊಟೊ ಪರಿಶೀಲನೆ ಇತ್ಯಾದಿ ಹಲವು ಸೇವೆಗಳಿಗೂ ಶುಲ್ಕ ನಿಗದಿಪಡಿಸುವ ಬಗ್ಗೆ ಬ್ಯಾಂಕಿನ ವೆಬ್‌ ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ, ಬ್ಯಾಂಕ್ ಆಫ್ ಇಂಡಿಯದ ಈ ಪ್ರಸ್ತಾವನೆ ಬಗ್ಗೆ ಮಾಧ್ಯಮದಲ್ಲಿ ಸುದ್ದಿಯಾದ ಮೇಲೆ, ತಮ್ಮ ವೆಬ್ ಸೈಟ್ ನಲ್ಲಿ ಹಾಕಿದ್ದ ಶುಲ್ಕ ನಿಗದಿ ಪ್ರಸ್ತಾವನೆ ಮಾಹಿತಿಯನ್ನು ತೆಗೆದುಹಾಕಲಾಗಿದೆ. ಇದರ ಜೊತೆಗೆ, ‘ನಾವು ಉಚಿತ ಬ್ಯಾಂಕಿಂಗ್ ಸೇವೆಗಳನ್ನು ನಿಲ್ಲಿಸುತ್ತೇವೆ ಎಂದು ವರದಿಯಾಗಿತ್ತು, ಆದರೆ, ಹಾಗೆ ಮಾಡುವ ಯಾವ ಉದ್ದೇಶವೂ ನಮಗಿಲ್ಲ’ ಎಂದು ಬ್ಯಾಂಕ್ ಆಫ್ ಇಂಡಿಯ ಸ್ಪಷ್ಟೀಕರಣ ನೀಡಿದೆ. ಇದು, ಗ್ರಾಹಕರಿಗೆ ತಾತ್ಕಾಲಿಕ ಸಮಾಧಾನ ನೀಡಿದರೂ ಕೂಡ, ಮುಂದಿನ ದಿನಗಳಲ್ಲಿ ಇಂಥದ್ದೆಲ್ಲ ಆಗುವ ಸಾಧ್ಯತೆಗಳು ಇದ್ದೇ ಇವೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Pass Book SBI ಬ್ಯಾಲೆನ್ಸ್ ವೆಬ್ ಸೈಟ್