ಗಾಂಜಾ ಮಾರಾಟ ಮೂವರ ಬಂಧನ


11-01-2018 418

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್ ವೇರ್ ಉದ್ಯೋಗಿಗಳಿಗೆ ಗಾಂಜಾ ಮತ್ತು ಮುಂತಾದ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯನ್ ಸೇರಿದಂತೆ ಮೂವರನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣೂರಿನ ವಿಕ್ಟರ್ ನೋಮುಸು (32), ಜೆಪಿ ನಗರದ ಜಾನ್ ಮೈಸನ್ (26), ಬೊಮ್ಮನಹಳ್ಳಿಯ ಉಮೇಶ್ ಕುಮಾರ್ (25) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ. ಬಂಧಿತರಿಂದ 120 ಗ್ರಾಂ ಹಸಿಶ್, 4 ಮೊಬೈಲ್‍ಗಳು, 8 ಗ್ರಾಂ ಗಾಂಜಾ, 32 ಎಲ್‍ಎಸ್‍ಡಿ ಪೇಪರ್‍ಗಳು, 3700 ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ವಿಕ್ಟರ್ ನೋಮುಸು ನೈಜೀರಿಯಾದವನಾಗಿದ್ದು, ಕಳೆದ ಆಗಸ್ಟ್ನಲ್ಲಿ ಬ್ಯುಸಿನೆಸ್ ವಿಸಾದಲ್ಲಿ ನಗರಕ್ಕೆ ಬಂದು ಹೆಣ್ಣೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ, ಸಾಫ್ಟ್ ವೇರ್ ವಿದ್ಯಾರ್ಥಿಗಳಿಗೆ ಹಸಿಶ್ ಹಾಗೂ ಎಲ್‍ಎಸ್‍ಡಿ ಪೇಪರ್ ಮಾರಾಟ ಮಾಡುತ್ತಿದ್ದ.

ಮತ್ತೊಬ್ಬ ಆರೋಪಿ ಉಮೇಶ್ ಕುಮಾರ್, ಒರಿಸ್ಸಾದಿಂದ ಗಾಂಜಾ ತರಿಸಿಕೊಂಡು ಇನ್ನೊಬ್ಬ ಆರೋಪಿ ಮೈಸನ್ ಜೊತೆ ಸೇರಿ ಸಣ್ಣ ಪ್ಯಾಕ್ಟ್‍ಗಳನ್ನು ಮಾಡಿಕೊಂಡು ಎಲ್ಲರೂ ಸೇರಿ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಕೋರಮಂಗಲ ಸುತ್ತ-ಮುತ್ತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದ ಕೋರಮಂಗಲ ಪೊಲೀಸರ ವಿಶೇಷ ತಂಡ ಸ್ವಾಭಿಮಾನಿ ಕಾರಂಜಿ ಪಾರ್ಕ್ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

 

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Nigerian ganja ವಿಶೇಷ ತಂಡ ಆಗ್ನೇಯ