ಇನ್ಫೋಸಿಸ್ ಮೂರ್ತಿ ಅಳಿಯನಿಗೆ ಸ್ಥಾನ


11-01-2018 655

ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಋುಷಿ ಸುನಾಕ್, ಇದೀಗ ಬ್ರಿಟನ್ ಪ್ರಧಾನಿ ಥೆರೆಸ ಮೇ ಅವರ ಸರ್ಕಾರ ಸೇರಿದ್ದಾರೆ. 37 ವರ್ಷದ ಋುಷಿ ಸುನಾಕ್ ಅವರನ್ನು ವಸತಿ, ಸಮುದಾಯ ಮತ್ತು ಸ್ಥಳೀಯ ಆಡಳಿತ ವಿಭಾಗದ ಅಧೀನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಋುಷಿ ಸುನಾಕ್,  2015ರಲ್ಲಿ ನಡೆದ ಚುನಾವಣೆಯಲ್ಲಿ ನಾರ್ಥ್ ಯಾರ್ಕ್‌ಶೈರ್‌ನ ರಿಚ್ಮಂಡ್ ಕ್ಷೇತ್ರದಿಂದ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿ ಬ್ರಿಟನ್ ಸಂಸತ್ ಪ್ರವೇಶಿಸಿದ್ದರು. ಋುಷಿ ಸುನಾಕ್, ನಾರಾಯಣ ಮೂರ್ತಿ-ಸುಧಾ ಮೂರ್ತಿ ಪುತ್ರಿ ಅಕ್ಷತಾ ಅವರನ್ನು 2009ರಲ್ಲಿ ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ಋುಷಿ-ಅಕ್ಷತಾ ದಂಪತಿಗೆ ಕೃಷ್ಣಾ ಮತ್ತು ಅನೌಷ್ಕ ಎಂಬ ಇಬ್ಬರು ಪುತ್ರಿಯರಿದ್ದಾರೆ.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Narayana Murthy infosys ಋುಷಿ ಸುನಾಕ್ ಬ್ರಿಟನ್