‘ಅವರು ಉಗ್ರಗಾಮಿಗಳಲ್ಲದೇ ಮತ್ತಿನ್ನೇನು’


11-01-2018 642

ಮೈಸೂರು: ನಾವು ಮನುಷ್ಯತ್ವ ಇರುವ ಹಿಂದುಗಳು, ಅವರು ಮನುಷ್ಯತ್ವ ಇಲ್ಲದ ಹಿಂದುಗಳು ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿಯವರಿಗೆ ಟಾಂಗ್ ನೀಡಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿ ಅವರು, ಬಿಜೆಪಿಯವರು ಹಿಂದುತ್ವದ ಹೆಸರಲ್ಲಿ ಮತಗಳ ಧ್ರುವೀಕರಣ ಪಡೆಯಲು ಯತ್ನಿಸುತ್ತಿದ್ದಾರೆ, ಆದರೆ ಅದು ಫಲಪ್ರದವಾಗುವುದಿಲ್ಲ, ಅವರಿಗೇ ಅದು ಮುಳುವಾಗುತ್ತದೆ ಅದನ್ನು ಅವರು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಸಾವಿನ ಮನೆಯಲ್ಲಿ ರಾಜಕಾರಣ ಮಾಡುವವರು ಯಾರು? ಅವರನ್ನು ಉಗ್ರಗಾಮಿಗಳು ಅನ್ನದೇ ಮತ್ತಿನ್ನೇನೂ ಹೇಳಲಿ, ಪಿಎಫ್ಐ, ಎಸ್ ಡಿಪಿಐ ಅಲ್ಲ, ಯಾರೂ ಉಗ್ರ ಚಟುವಟಿಕೆಯಲ್ಲಿ ತೊಡಗಿರ್ತಾರೋ ಅವರು ಉಗ್ರರಲ್ಲವೇ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

siddaramaiah Air port ಸಾವಿನ ಮನೆ ಪಿಎಫ್ಐ