ಧನ್ಯಶ್ರೀ ಪ್ರಕರಣ: ಪ್ರಮುಖ ಆರೋಪಿ ಬಂಧನ


11-01-2018 279

ಚಿಕ್ಕಮಗಳೂರು: ಮೂಡಿಗೆರೆ ಡಿಎಸ್ ಬಿಜಿ ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಸಂತೋಷ್ ಅಲಿಯಾಸ್ ರಾಕೇಶ್ (20) ನನ್ನು ಪೊಲೀಸರು ಬಂಧಿಸಿದ್ದಾರೆ. ರಾಕೇಶ್ ಬಂಟ್ವಾಳದಲ್ಲಿ ಲಿಫ್ಟ್ ಮೆಕ್ಯಾನಿಕ್ ಆಗಿದ್ದ ಎಂದು ತಿಳಿದು ಬಂದಿದೆ. ಮೂಡಿಗೆರೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರಫೀಕ್ ಮತ್ತು ಸಿಬ್ಬಂದಿ ಈತನನ್ನು ಬೆಂಗಳೂರಿನಲ್ಲಿಂದು ಬಂಧಿಸಿದ್ದಾರೆ.

ಧನ್ಯಶ್ರೀ ತನ್ನ ವಾಟ್ಸಾಪ್ ಡಿಪಿಗೆ ಬರೀ ಕಣ್ಣಿನ ಚಿತ್ರ ಹಾಕಿದ್ದಕ್ಕೆ ನೀನು ಅನ್ಯಕೋಮಿನ ಯುವಕನ ಜತೆ ಓಡಾಡುತ್ತಿದ್ದೀಯ ಎಂದು ತರಾಟೆಗೆ ತೆಗೆದುಕೊಂಡಿ ರಾಕೇಶ್, ಜನವರಿ 5ರಂದು ಮೂಡಿಗೆರೆಯ ಕೆಲ ಹಿಂದೂ ಸಂಘಟನೆಗಳ ಮುಖಂಡರೊಂದಿಗೆ ಸೇರಿ, ಧನ್ಯಶ್ರೀ ಮನೆಗೆ ಹೋಗಿ ದಾಂಧಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಧನ್ಯಶ್ರೀ ಡೆತ್ ನೋಟ್ ಬರೆದಿಟ್ಟು ಮಾರನೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪ್ರಕರಣ ರಾಜ್ಯದಲ್ಲಿ ಕೊಲಾಹಾಲವನ್ನೇ ಎಬ್ಬಿಸಿತ್ತು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

suicide bantwala ಮುಖಂಡ ವಾಟ್ಸಾಪ್