100 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ


11-01-2018 636

ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಗೆ ಕನ್ನ ಹಾಕುತ್ತಿದ್ದ ಪ್ರಕರಣ ಬೆಳಗಾವಿಯಲ್ಲಿ ಬಯಲಾಗಿದೆ. ಇಂದು ಸಿಸಿಬಿ ಮತ್ತು ಉದ್ಯಮಬಾಗ್ ಪೊಲೀಸರ ದಾಳಿ ವೇಳೆಯಲ್ಲಿ 100 ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಉದ್ಯಮಬಾಗ ಬಳಿಯ ಚೊಣ್ಣದ ರೈಸ್ ಮಿಲ್ ನಲ್ಲಿ ದಂಧೆ ನಡೆಯುತ್ತಿದ್ದು ಮಾಹಿತಿಯನ್ನಾಧರಿಸಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಮಿಲ್ಗೆ ಪೂರೈಕೆಯಾಗುತ್ತಿದ್ದ ಅಕ್ಕಿ ಬೆಳಗಾವಿ ಜಿಲ್ಲೆಯ ವಿವಿಧ ಭಾಗದಿಂದ ಬರುತ್ತಿತ್ತು ಎಂದು ಹೇಳಲಾಗಿದೆ. ಈ ಬಗ್ಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು. ಸ್ಥಳದಲ್ಲಿ ಇದ್ದ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

anna Bhagya Rice mill ಸರ್ಕಾರ ರೈಸ್ ಮಿಲ್