ಸಿಎಂಗೆ ಮಾಜಿ ಸಚಿವ ಸೋಮಣ್ಣ ಸವಾಲ್


11-01-2018 453

ಹಾಸನ: ಮಾಜಿ ಸಚವ ವಿ.ಸೋಮಣ್ಣ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕಿದ್ದಾರೆ. ಹಾಸನದಲ್ಲಿಂದು ಮಾತನಾಡಿದ ಅವರು ಸಿಎಂ ಕುರ್ಚಿ ಇನ್ನು ಕೇವಲ 70 ದಿನ ಮಾತ್ರ ಎಂದಿದ್ದಾರೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕದಿರುವುದು ಸಿದ್ದರಾಮಯ್ಯ ಅಹಂಕಾರ ಹೆಚ್ಚಲು ಕಾರಣ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರ ನಾಲಿಗೆಯೇ ಅವರ ಶತ್ರು, ಅವರು ಹಳೆಯದನ್ನು ಮರೆಯಬಾರದು. ಕಾಂಗ್ರೆಸ್ ಹೈಕಮಾಂಡ್ ಓಲೈಸಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ದೂರಿದ್ದಾರೆ. ಅದಲ್ಲದೇ ಮುಂದಿನ ಚುನಾವಣೆಯಲ್ಲಿ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದಿದ್ದರೇ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ. ಅದಲ್ಲದೇ ಅರ್ಎಸ್ಎಸ್ ಸಂಘಟನೆ ಭಯೋತ್ಪಾದಕ ಸಂಸ್ಥೆ ಎನ್ನುವುದನ್ನು ಸಿಎಂ ಸಾಬೀತು ಪಡಿಸುವುದಾದರೆ ಬಹಿರಂಗ ಸವಾಲಿಗೆ ಸಿದ್ಧ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

V. Somanna RSS ಸಂಘಟನೆ ಅಹಂಕಾರ