ಅಮಿತ್ ಷಾ ವಿರುದ್ಧ ರೇವಣ್ಣ ಕಿಡಿ


10-01-2018 286

ಕೊಪ್ಪಳ: ಅಮಿತ್ ಷಾ ರಾಜ್ಯಕ್ಕೆ ಬಂದ ಮೇಲೆ ಕೊಲೆಗಳಾಗುತ್ತಿವೆ ಎಂದು, ಸಾರಿಗೆ ಸಿಚಿವ ಎಚ್.ಎಂ.ರೇವಣ್ಣ ಅವರು ಆರೋಪ ಮಾಡಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದವರು ಬಿಜೆಪಿ ಕಾರ್ಯಕರ್ತರೆಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ, ಅಮಿತ್ ಷಾ ಬಂದು ಹೋದ ಮೇಲೆ ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆ, ಶೋಭಾ ಕಂರದ್ಲಾಜೆ ರೋಷಾವೇಶಗೊಂಡಿದ್ದಾರೆ ಎಂದರು.

ಇನ್ನು ಅಂತರ್ ನಿಗಮಗಳ ಸಿಬ್ಬಂದಿ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ತಾಂತ್ರಿಕ ಸಮಸ್ಯೆಗಳಿಂದ ವರ್ಗಾವಣೆ ತಡವಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸುತ್ತೇವೆ, ವರ್ಗಾವಣೆಗಾಗಿ ಈಗಾಗಲೇ ಕೌನ್ಸಿಲಿಂಗ್ ನಡೆಯುತ್ತಿದೆ, ಇದೆ ತಿಂಗಳ 18 ಮತ್ತು 19 ರಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ