ರಾಜಕಾಲುವೆಗೆ ಬಿದ್ದು ಮಗು ಸಾವು


09-01-2018 410

ಬೆಂಗಳೂರು: ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗು ರಾಜಕಾಲುವೆಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದಲ್ಲಿ ನಡೆದಿದೆ. ಕಲಬುರಗಿ ಮೂಲದ ತನುಶ್ರೀ ಮೃತ ಮಗುವಾಗಿದೆ. ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ತನುಶ್ರೀ ತಂದೆ-ತಾಯಿ, ಕೂಲಿ ಕೆಲಸ ಮಾಡಿಕೊಂಡು ದೊಡ್ಡಬೊಮ್ಮಸಂದ್ರದ ರಾಜಕಾಲುವೆ ಪಕ್ಕ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಬೆಳಿಗ್ಗೆ ಟೆಂಟ್‍ನಿಂದ ಆಟವಾಡುತ್ತ ರಾಜಕಾಲುವೆ ಬಳಿ ಹೋದ ತನುಶ್ರೀ, ಆಯ ತಪ್ಪಿ ಕಾಲುವೆಗೆ ಬಿದ್ದು ಮೃತಪಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

child death canal ರಾಜಕಾಲುವೆ ತನಿಖೆ