ವಿಜಯಪುರದಲ್ಲಿ 2 ದಿನ ನಿಷೇದಾಜ್ಞೆ ಜಾರಿ


09-01-2018 421

ವಿಜಯಪುರ: ಬಾಲಕಿ ದಾನಮ್ಮ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಇಂದು ಕರೆ ನೀಡಿದ್ದ ವಿಜಯಪುರ ಚಲೋ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಅದಲ್ಲದೆ ಇಂದಿನಿಂದ ಎರಡು ದಿನ ವಿಜಯಪುರದಲ್ಲಿ ನಿಷೇದಾಜ್ಞೆ ಜಾರಿ ಮಾಡಿದೆ. ಜೊತೆಗೆ ವಿಜಯಪುರ ಚಲೋ' ಪ್ರತಿಭಟನೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ತಿರಸ್ಕರಿಲಾಗಿದೆ. ನಿನ್ನೆ ಎರಡು ದಲಿತ ಸಂಘಟನೆಗಳ ಗುಂಪುಗಳ ನಡುವೆ ಗಲಾಟೆಯಾದ ಕಾರಣ ಸಿ.ಆರ್.ಪಿ.ಸಿ ಕಲಂ 144 ಅನ್ವಯ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಸಂಜೆ 6 ಗಂಟೆಯ ವರೆಗೆ ನಿಷೇದಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಅಲ್ಲದೆ ಪ್ರತಿಭಟನೆ, ಸಭೆ, ಸಮಾರಂಭಗಳಿಗೆ ನಿಷೇಧ ಹೇರಿದ್ದಾರೆ. ಇನ್ನು ಪೊಲೀಸರ ಈ ಕ್ರಮವನ್ನ ವಿಜಯಪುರ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದ ಭಾಸ್ಕರ ಪ್ರಸಾದ್ ಹಾಗೂ ಬೆಂಬಲಿಗರು ಖಂಡಿಸಿದ್ದಾರೆ . ಜಿಲ್ಲಾಡಳಿತ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿ ವಿಜಯಪುರ  ಚಲೋ‌ ಕಾರ್ಯಕ್ರಮಕ್ಕೆ ನಿಷೇಧ ಹೇರಿದೆ. ಆದರೆ ನಾವು ಯಾವುದಕ್ಕೂ ಬಗ್ಗದೆ ಹೋರಾಟ ನಡೆಸುತ್ತೇವೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಮಾತನಾಡಿದಕ್ಕಾಗಿ ಈ ರೀತಿ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದ್ದಾರೆ. ಆದರೆ ನಾವು ಹೋರಾಟ ಮಾಡೇ ಮಾಡುತ್ತೇವೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರದಾದ್ಯಂತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.


ಒಂದು ಕಮೆಂಟನ್ನು ಬಿಡಿ