ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪೈಪೋಟಿ ಹಿನ್ನೆಲೆ ಮುಖ್ಯಮಂತ್ರಿ ದೆಹಲಿಗೆ ತೆರಳುವ ಸಂಭವ


18-04-2017 272

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪೈಪೋಟಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ತಮ್ಮ ಇಂಗಿತವನ್ನು ನೇರಾನೇರ ಮುಟ್ಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ (ಏ.23) ಮತ್ತೆ ದೆಹಲಿಗೆ ತೆರಳುವ ಸಂಭವವಿದೆ.

ಭಾನುವಾರ ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಜ್ಞಾನ ಆಯೋಗದ ಸಭೆಗೆ ಸಿದ್ದರಾಮಯ್ಯ ಅವರಿಗೆ ಆಹ್ವಾನವಿದೆ. ಈ ಸಭೆಗಾಗಿ ದೆಹಲಿಗೆ ತೆರಳಲಿರುವ ಅವರು, ಇದೇ ವೇಳೆ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ಭೇಟಿಗೆ ಸಮಯಾವಕಾಶವನ್ನು ಕೋರಲಿದ್ದಾರೆ. ದೊರೆತರೆ ವರಿಷ್ಠರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ತಮ್ಮ ಅಭಿಪ್ರಾಯವನ್ನು ನೇರವಾಗಿ ಮಂಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

 ರಾಜ್ಯ ನಾಯಕತ್ವ ವಿಧಾನ ಪರಿಷತ್‌ ಸದಸ್ಯರ ನಾಮಕರಣದ ಕುರಿತು ತಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿರುವ ಬೆನ್ನಲ್ಲೇ ಈ ವಾರದೊಳಗೆ ನಾಮಕರಣವಾಗಲಿದೆ ಎನ್ನಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಖಾಲಿಯಿರುವ ಮೂರು ಸದಸ್ಯ ಸ್ಥಾನಗಳ ಪೈಕಿ ಈಗ ಎರಡಕ್ಕೆ ಮಾತ್ರ ನಾಮಕರಣ ನಡೆಯಲಿದೆ ಎಂದು ಮೂಲಗಳು ಹೇಳುತ್ತಿವೆ

Links :