‘ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ’-ಡಿಕೆಶಿ


02-01-2018 707

ಬೆಂಗಳೂರು: ನಾಳೆ ಸಿಎಂ ಚನ್ನಪಟ್ಟಣಕ್ಕೆ ಬರ್ತಿದ್ದಾರೆ, ಅದು ಸರ್ಕಾರದ ಕಾರ್ಯಕ್ರಮವಾಗಿದ್ದು, ರಾಮನಗರ ಜಿಲ್ಲೆಯಲ್ಲೇ ಚನ್ನಪಟ್ಟಣಕ್ಕೆ ಅತೀ ಹೆಚ್ಚು ಅನುದಾನ ನೀಡಿದ್ದೇವೆ, ಚನ್ನಪಟ್ಟಣದಲ್ಲಿನ ಕೆರೆಗಳ ತುಂಬಿಸುವ ಯೋಜನೆ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳಿ ಸಿಎಂ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಹತ್ತು ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಚುನಾವಣಾ ವಿಚಾರ: ಸಿಎಂ ಒಂದು ಸರ್ವೆ ಮಾಡಿಸುತ್ತಿದ್ದಾರೆ. ಪಕ್ಷದ ವತಿಯಿಂದಲೂ ಕೂಡ ಸರ್ವೆ ನಡೆದಿದೆ, ಬೇಕಿದ್ರೆ ಬೆಟ್ ಕಟ್ಟಲೂ ರೆಡಿ, ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ ಎಂದು ನುಡಿದಿದ್ದಾರೆ. ಇನ್ನು ಶೃಂಗೇರಿ ರಾಹುಲ್ ಗಾಂಧಿ ಭೇಟಿ ವಿಚಾರವಾಗಿ ಮಾತನಾಡಿ, ಶೃಂಗೇರಿ ಶಾರದಾಂಬೆಗೂ ಗಾಂಧಿ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ರಾಹುಲ್ ಗಾಂಧಿ ಭೇಟಿ ನೀಡಿದದೆ ತಪ್ಪೇನಿಲ್ಲ ಎಂದರು. ಅದಲ್ಲದೇ ಕೂಡ್ಲಿಗಿಯ ಬಿಜೆಪಿ ಶಾಸಕ ಬಿ.ನಾಗೇಂದ್ರ ಕಾಂಗ್ರೆಸ್ ಗೆ ಬರೋ ವಿಚಾರವಾಗಿ ಪ್ರತಿಕ್ರಿಯಿಸಿ, ನಾಗೇಂದ್ರ ನನ್ನ ಆತ್ಮೀಯ ಸ್ನೇಹಿತ, ನಮ್ಮ ಪಕ್ಷಕ್ಕೆ ಬಂದರೆ ದೊಡ್ಡ ಆಸ್ತಿಯಾಗಲಿದ್ದಾರೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

D.K.Shivakumar sringeri ಚನ್ನಪಟ್ಟಣ ಅಭಿವೃದ್ಧಿ