ಬೆಂಕಿ ತಗುಲಿ 2 ಭಾಗವಾದ ವ್ಯಕ್ತಿ ದೇಹ


01-01-2018 299

ಬೆಳಗಾವಿ: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಬೆಂಕಿ ತಗುಲಿ ಸಜೀವ ದಹನವಾಗಿರುವ ಘಟನೆಯು ಬೆಳಗಾವಿಯಲ್ಲಿ ನಡೆದಿದೆ. ಹೊಸ ವರ್ಷಾಚರಣೆಯ ದಿನವೇ ಭೀಕರ ದುರಂತ ಸಂಭವಿಸಿದೆ. ಪ್ರಭಾಕರ ವಸಂತ ಹೊಕ್ಕಳೇಕರ್ (65) ಮೃತ ವ್ಯಕ್ತಿ. ಬೆಳಗಾವಿಯ ಉಧ್ಯಮ ಬಾಗ್ ಬಾಗ್ ಠಾಣೆಯ ಬಳಿ ಈ ದುರ್ಘಟನೆ ನೆಡೆದಿದೆ. ಮೃತ ಪ್ರಭಾಕರ ಬೆಳಗಾವಿ ಶಿವಶಕ್ತಿ ಬಡಾವಣೆ ನಿವಾಸಿಯಾಗಿದ್ದು, ಮ್ಯಾನಸನ್ ಎಂಜಿನಿಯರ್ ಕಂಪನಿಯ ಕಾವಲುಗಾರಾಗಿದ್ದರು ಎಂದು ತಿಳಿದು ಬಂದಿದೆ. ಕಳೆದ 6 ವರ್ಷದಿಂದ ಇದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಡರಾತ್ರಿ ಕಾರ್ಖಾನೆ ಆವರಣದಲ್ಲಿ ಚಳಿ ಕಾಯಿಸುವಾಗ ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟಿದ್ದಾರೆ. ಬೆಂಕಿ ಹತ್ತಿದ ನಂತರ ಮೃತ ದೇಹ ನಾಯಿಗಳ ಪಾಲಾಗಿದ್ದು, ಮೃತ ದೇಹ ಎರಡು ಭಾಗವಾಗಿದೆ. ಸ್ಥಳಕ್ಕೆ ಉಧ್ಯಮ ಬಾಗ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Belagavi burnt ಸಜೀವ ದಹನ ಭೀಕರ