3000 ಸೈಬರ್ ಕ್ರೈಂ ಕೇಸುಗಳು ದಾಖಲು


30-12-2017 637

ಬೆಂಗಳೂರು: ನಗರದಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಮಿತಿ ಮೀರಿ ಹೆಚ್ಚಾಗುತ್ತಿದ್ದು ಪ್ರತಿನಿತ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಒಂದಲ್ಲ ಒಂದು ರೀತಿಯ ದೂರುಗಳು ದಾಖಲಾಗುತ್ತಿದೆ. ಆನ್‍ಲೈನ್ ವಂಚನೆ ಕೃತ್ಯಗಳು ಸೈಬರ್ ಕ್ರೈಂ ಪೊಲೀಸರಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ವಂಚಕರ ಬಗ್ಗೆ ಸಾರ್ವಜನಿಕರು ಜಾಗೃತರಾಗದಿರುವುದು ಕೂಡ ಆನ್‍ಲೈನ್ ವಂಚನೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ

ಆನ್ ಲೈನ್ ವಂಚಕರ ವಿರುದ್ದ ಈ ವರ್ಷ3000 ಸಾವಿರ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ಅಂಕಿ ಅಂಶಗಳಿಂದ ಬೆಳಕಿಗೆ ಬಂದಿದೆ. ಇದರಲ್ಲಿ 2000 ಸಾವಿರಕ್ಕೂ ಅಧಿಕ ಎಫ್‍ಐಆರ್ ಮಾಡಿರುವ ಸೈಬರ್ ಕ್ರೈಂ ಪೊಲೀಸರು ಅದರಲ್ಲಿ ಕೇವಲ 154 ಕೇಸ್‍ಗಳನ್ನು ಮಾತ್ರ ಪತ್ತೆ ಮಾಡಿದ್ದಾರೆ

ಆನ್‍ಲೈನ್ ವಂಚನೆ ಮಾಡುತ್ತಿರುವುದು ವಿದೇಶಿ ಪ್ರಜೆಗಳು ಎಂಬ ಸ್ಫೋಟಕ ಸತ್ಯವನ್ನು ಪೊಲೀಸರೇ ಒಪ್ಪಿಕೊಂಡಿದ್ದಾರೆ. ಮೊದಲು ಫೇಸ್ ಬುಕ್, ವಾಟ್ಸಪ್, ಇ ಮೇಲ್ ಮುಖಾಂತರ ಪರಿಚಯ ಮಾಡಿಕೊಳ್ಳುವ ಆಫ್ರಿಕನ್ ಅಥವಾ ನೈಜೀರಿಯಾ ಯುವತಿಯರು ಅಮಾಯಕರನ್ನೇ ಗುರಿಯಾಗಿಸಿಕೊಂಡು ನಯವಾಗಿ ಮಾತನಾಡಿ ಬುಟ್ಟಿಗೆ ಹಾಕಿಕೊಳ್ಳಲಿದ್ದಾರೆ.

ಆನ್ ಲೈನ್ ಖದೀಮರು ಕಸ್ಟಮ್ಸ್ ಅಧಿಕಾರಿಗಳು, ಆರ್‍ಬಿಐ,ಬ್ಯಾಂಕ್ ಅಧಿಕಾರಿ, ನಿಮ್ಮ ಖಾತೆಗೆ ಆಧಾರ್ ಲಿಂಕ್ ಮಾಡಬೇಕು ಎಂದು ಹೇಳಿ ಅಮಾಯಕರಿಗೆ ವಂಚಿಸುತ್ತಿದ್ದಾರೆ. ಇತ್ತೀಚೆಗೆ ಪತಂಜಲಿ ವೆಬ್ ಸೈಟ್ ನಕಲಿ ಮಾಡಿ ವ್ಯಾಪಾರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ ಅದೇ ರೀತಿ ಕೆಲಸ, ಸಾಲ ಕೊಡಿಸುವುದು, ಉದ್ಯಮದ ಹೆಸರಲ್ಲಿ ಅಮಾಯಕರಿಂದ ಎಟಿಎಂ, ಡೆಬಿಟ್, ಕ್ರೆಡಿಟ್ ಕಾರ್ಡ್ ನಂಬರ್ ಓಟಿಪಿ ಪಡೆದು ಅಕೌಂಟ್ ಗಳಿಂದ ಹಣ ಎಗರಿಸುತ್ತಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Online cyber crime ಕಸ್ಟಮ್ಸ್ ಫೇಸ್ ಬುಕ್