ಕಳಪೆ ಕಾಮಗಾರಿ: ಅಪಾರ ನೀರು ಪೋಲು


30-12-2017 285

ಕೊಪ್ಪಳ:  ಕೆರೆ ಒಡೆದು ಅಪಾರ ಪ್ರಮಾಣದ ನೀರು ಪೊಲಾಗಿರುವ ಮತ್ತು ಪೋಲಾಗುತ್ತಿರುವ ಘಟನೆಯು ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸುಳೇಕಲ್ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಕಟ್ಟೆ ನಿನ್ನೆ ಸಂಜೆ ಒಡೆದಿದ್ದು, ಅಪಾರ ಪ್ರಮಾಣ ನೀರು ಪೋಲಾಗಿದೆ. ಸುಮಾರು 16 ಎಕರೆ ವಿಸ್ತೀರ್ಣದಲ್ಲಿ, ರಾಜೀವ್ ಗಾಂಧಿ ವಾಟರ್ ಸಬ್ ಮಿಷನ್ ಕುಡಿವ ನೀರಿನ ಯೋಜನೆಯಡಿ ಈ ಕೆರೆ ನಿರ್ಮಾಣವಾಗಿತ್ತು. ನಿರ್ಮಾಣದ ವೆಚ್ಚ ಸರಿಸುಮಾರು ಮೂರು ಕೋಟಿಯದ್ದಾಗಿದೆ. ಶಾಸಕ‌ ಶಿವರಾಜ ತಂಗಡಗಿ ಬೆಂಬಗಲಿಗರಿಂದ ಕರೆ ನಿರ್ಮಾಣವಾಗಿರುವುದಾಗಿ ತಿಳಿದು ಬಂದಿದೆ.

16 ಗ್ರಾಮಗಳಿಗೆ ಕುಡಿವ ನೀರು ಒದಗಿಸುವ ಯೋಜನೆ ಇದಾಗಿದ್ದು. ಕಳಪೆ ಕಾಮಗಾರಿಯಿಂದ ಕೆರೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಿದರೂ, ಸ್ಥಳಕ್ಕೆ ಬಾರದಿದ್ದು, ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಸಮರ್ಪಕ ನಿರ್ವಹಣೆ ಇಲ್ಲದೆ ನೀರು ಮಣ್ಣು ಪಾಲಾಗಿದ್ದು, ರೈತರು ಸ್ಥಳೀಯರು, ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Shivaraj Tangadagi Rajeev gandhi ಯೋಜನೆ ಕಳಪೆ ಕಾಮಗಾರಿ