ಟಿಕೆಟ್ ಗಾಗಿ ಬೆಂಬಲಿಗರ ಕೂಗಾಟ


28-12-2017 343

ಶಿವಮೊಗ್ಗ: ಶಿವಮೊಗ್ಗದ ಸಾಗರ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಇಬ್ಬರು ನಾಯಕರ ಬೆಂಬಲಿಗರು ಕೂಗಾಡಿಕೊಂಡ ಘಟನೆ ನಡೆದಿದೆ. ಸಾಗರದಲ್ಲಿ ನಡೆಯುತ್ತಿರುವ ಬಿಜೆಪಿಯ ಪರಿವರ್ತನಾ ರ‍್ಯಾಲಿಯಲ್ಲಿ ಈ ಘಟನೆ ಸಂಭವಿಸಿದೆ. ಯಾತ್ರೆಯ ಮೆರವಣಿಗೆ ನಗರಸಭೆ ಮೈದಾನಕ್ಕೆ ಆಗಮಿಸುತ್ತಿದ್ದಂತೆಯೇ ಬೇಳೂರು ಗೋಲಪಾಕೃಷ್ಣ ಮತ್ತು ಹರತಾಳು ಹಾಲಪ್ಪ ಬೆಂಬಲಿಗರು  ವಿಪರೀತ ಕೂಗಿಕೊಂಡಿದ್ದಾರೆ. ಎರಡು ಬಣಗಳಿಂದ ಪಕ್ಷಕ್ಕೆ ಬಿಟ್ಟು ತಮ್ಮ ನಾಯಕರುಗಳಿಗೆ ಜಯಕಾರ ಹಾಕಿದ್ದಾರೆ. ಪಕ್ಷದ ರಾಜ್ಯದರ್ಶಿ ರವಿಕುಮಾರ್ ಘೋಷಣೆ ನಿಲ್ಲಿಸುವಂತೆ ಹೇಳಿದರು ಸಹ ಎರಡು ಬಣಗಳಿಂದ ಘೋಷಣೆ ಮುಂದುವರಿಸಿದ್ದರು. ಇದರಿಂದ ವೇದಿಕೆಯಲ್ಲಿದ್ದವರಿಗೆ ಇರಿಸು ಮುರಿಸು ಉಂಟಾಗಿತ್ತು. ವೇದಿಕೆಯಲ್ಲಿ ಇಬ್ಬರ ಹೆಸರನ್ನು ಹೇಳುತ್ತಿದ್ದಂತೆಯೇ ಅಭಿಮಾನಿಗಳಿಂದ ಜಯಕಾರ ಮತ್ತೆ ಮುಂದುವರೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ, ಗೋಪಾಲಕೃಷ್ಣ. ಹರತಾಳು ಹಾಲಪ್ಪ, ಶಾಸಕ ಸುರೇಶ್ ಕುಮಾರ್, ಕುಮಾರ್ ಬಂಗಾರಪ್ಪ, ತೇಜಸ್ವಿನಿ ಗೌಡ, ಬಿ.ವೈ.ರಾಘವೇಂದ್ರ ಸೇರಿ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.


ಒಂದು ಕಮೆಂಟನ್ನು ಬಿಡಿ