ಭೀಕರ ಅಪಘಾತ 5 ಮಂದಿ ದುರ್ಮರಣ


28-12-2017 352

ಕೋಲಾರ: ಆಂಧ್ರದ ಗಡಿ ಭಾಗದ ಚಿತ್ತೂರು ಬಳಿ ಭೀಕರ ಅಪಘಾತ ಸಂಭವಿಸಿದೆ. ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟಿಟಿ ನಡುವೆ ಡಿಕ್ಕಿಯಾಗಿದ್ದು, ಐದು ಮಂದಿ ಸಾವಿಗೀಡಾಗಿದ್ದಾರೆ. ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯದ ಬಳಿ ಈ ದುರ್ಘಟನೆ ನಡೆದಿದೆ.

ಬೆಂಗಳೂರಿನಿಂದ ಚಿತ್ತೂರಿಗೆ ಹೊರಟಿದ್ದ ಸಾರಿಗೆ ಬಸ್ ಹಾಗೂ ತಿರುಪತಿ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಟಿಟಿ ನಡುವೆ ಅಪಘಾತವಾದ ಪರಿಣಾಮ 5 ಮಂದಿ ಮೃತಪಟ್ಟು 11 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಛತ್ತೀಸ್ ಗಡದವರಾಗಿದ್ದು, ಟೆಂಪೋ ಚಾಲಕ ಕಾಮ್ಮಗಿರಿ(35), ರಾಮದಾಸ್(64), ಶಾಂಚರಣ್ (56), ರೂಪಾಲಿ(20), ಸಾಲಿಕಮ್ಮರಿ(62) ಎಂದು ಗುರುತಿಲಾಗಿದೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಆಂಧ್ರಪ್ರದೇಶದ ಕಾರ್ಮಿಕ ಸಚಿವ ಅಮರ ನಾಥ್ ರೆಡ್ಡಿ ಹಾಗೂ ಚಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Accident Highway ಸಾರಿಗೆ ಬಸ್ ಅಪಘಾತ