ಗೋವಾ-ಕರ್ನಾಟಕ ಬಸ್ ಸಂಚಾರ ಸ್ಥಗಿತ


27-12-2017 495

ಬೆಳಗಾವಿ: ಮಹದಾಯಿ ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಬಂದ್ ಹಿನ್ನೆಲೆ, ಗೋವಾ-ಕರ್ನಾಟಕ ಮಧ್ಯೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಕರ್ನಾಟಕದಿಂದ ಯಾವುದೇ ವಾಹನ ಗೋವಾಕ್ಕೆ ಹೋಗುತ್ತಿಲ್ಲ, ಗೋವಾದಿಂದಲೂ ಯಾವುದೇ ಬಸ್ ಗಳು ಬರುತ್ತಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಗೋವಾ ರಾಜ್ಯಕ್ಕೆ ಹೋಗುವ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.

ಅಲ್ಲದೇ ಬೆಳಗಾವಿಯಲ್ಲಿ ಬಂದ್ ಗೆ ಹಲವು ಸಂಘಟನೆಗಳ ಬೆಂಬಲ ನೀಡಿದ್ದು, ಬೆಳಗಾವಿ ನಗರದಲ್ಲಿ ಕೇವಲ ಸಾಂಕೇತಿಕ ಧರಣಿ ನಡೆಸಿದ್ದು, ಬೈಲಹೊಂಗಲ ಪಟ್ಟಣ ಸಂಪೂರ್ಣ ಬಂದ್ ಆಗಿದೆ. ಬಸ್ ಸಂಚಾರವಿಲ್ಲದೇ, ಜನರೂ ಇಲ್ಲದೇ  ಬಸ್ನಿಲ್ದಾಣ ಬಿಕೋ ಎನ್ನುತ್ತಿದೆ. ಜಿಲ್ಲೆಯ ಸವದತ್ತಿ, ರಾಮದುರ್ಗ ಹಾಗೂ ಹೀರೇಬಾಗೇವಾಡಿಯಲ್ಲಿ ಹೋರಾಟದ ಕಾವು ಹೆಚ್ಚಿದೆ. ಇನ್ನು ಇಂದು ನಡೆಯಬೇಕಿದ್ದ ವಿಟಿಯು ಪರೀಕ್ಷೆ ಮುಂದೂಡಿ ಕುಲಸಚಿವರು ಆದೇಶಿಸಿದ್ದಾರೆ. ಬೈಲಹೊಂಗಲ, ಸವದತ್ತಿ, ರಾಮದುರ್ಗ ತಾಲ್ಲೂಕಿನ ‌ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು, ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ತಿಳಿಸಿದ್ದಾರೆ.

ಇನ್ನು ನಗರದ ಚನ್ನಮ್ಮ ವೃತ್ತದಲ್ಲಿ ರಸ್ತೆ ಮಧ್ಯ ಕುಳಿತ ರೈತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ವಾಹನ ಸಂಚಾರ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿ, ರಾಜಕೀಯ ಮಾಡುವುದನ್ನು ನಿಲ್ಲಿಸಿ ಕೂಡಲೇ ಮಹದಾಯಿ ವಿವಾದ ಇತ್ಯರ್ಥಗೊಳಿಸುವಂತೆ ಒತ್ತಾಯಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Mahadayi Bandh ಕುಲಸಚಿವ ಗೋವಾ -ಕರ್ನಾಟಕ