‘ಈ ಬಾರಿ ಹಾಲಿ ಶಾಸಕರಿಗೂ ಟಿಕೆಟ್’..?


26-12-2017 756

ಮೈಸೂರು: ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಇಲ್ಲ, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಇಬ್ಬರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

224 ಕ್ಷೇತ್ರಗಳನ್ನು ಸುತ್ತಲು ಮೂರು ತಿಂಗಳು ಸಮಯ ಬೇಕು, ಅದಕ್ಕಾಗಿಯೇ ನಾವು ಎರಡು ಹಂತಗಳಲ್ಲಿ ಪ್ರವಾಸ ಆರಂಭಿಸಿದ್ದೇವೆ, ಪರಮೇಶ್ವರ್ ಒಂದು ಕಡೆ ಹೋದ್ರೆ ಸಿದ್ದರಾಮಯ್ಯ ಇನ್ನೊಂದು ಕಡೆ ಹೋಗುತ್ತಿದ್ದಾರೆ. ಇಬ್ಬರ ಪ್ರವಾಸಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ಬಿಜೆಪಿಯವರು ನಮ್ಮಲ್ಲಿ ಅಸಮಾಧಾನ ಇದೆ ಅಂತ ಸುಮ್ಮನೆ ಜನರಲ್ಲಿ ಗೊಂದಲ ಸೃಷ್ಠಿಸುತ್ತಿದ್ದಾರೆ. ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತೇವೆ ತಿಳಿಸಿದ ಅವರು, ಎಷ್ಟು ಜನರಿಗೆ ಅನ್ನೋದನ್ನು ಮುಂದಿನ ಹಂತದಲ್ಲಿ ತಿಳಿಸುತ್ತೇನೆ ಎಂದರು. ನಾವು ತಳಹಂತದಿಂದ ಸಂಘಟನೆ ಆರಂಭಿಸಿದ್ದೇವೆ, ಈ ಹಿನ್ನೆಲೆಯಲ್ಲಿ ಇಂದು ಮೈಸೂರಲ್ಲಿ ನಡೆಯುತ್ತಿರುವ ಕಾರ್ಯಕರ್ತರ ತರಬೇತಿ ಶಿಬಿರಕ್ಕೆ ಭೇಟಿ ನೀಡಿದ್ದೇವೆ ಎಂದು ತಿಳಿಸಿದರು.

 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

K.C.Venugopal KPCC ಶಾಸಕ ಕಾರ್ಯಕರ್ತ