ಪತ್ನಿ ಕೊಲೆಗೈದ ಪತಿ ಅರೆಸ್ಟ್


26-12-2017 550

ಶಿವಮೊಗ್ಗ: ಹೆಂಡತಿಯ ಕತ್ತುಹಿಸುಕಿ ಕೊಲೆಗೈದು ಪರಾರಿಯಾಗಿದ್ದ, ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯು ಶಿವಮೊಗ್ಗದಲ್ಲಿ ನಡೆದಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಮಮತಾ ಕೊಲೆಗೀಡಾದ ಮಹಿಳೆ. ನಿನ್ನೆ ತಡರಾತ್ರಿ ಶಿವಮೊಗ್ಗದ ನವಿಲೆಯ ಮಾರುತಿ ಬಡಾವಣೆಯಲ್ಲಿ ಘಟನೆ ನೆಡೆದಿತ್ತು. ಪತ್ನಿಯ ಶೀಲ ಶಂಕಿಸಿ, ಗಂಡ ಹಾಲೇಶ್, ತನ್ನ ಪತ್ನಿಯಾದ ಮಮತ ಎಂಬುವರನ್ನು ಕತ್ತು ಹಿಸುಕಿ ಕೊಂದಿದ್ದನು. ಈ ಕುರಿತು ಮೃತ ಮಮತಾಳ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನು ತನಿಖೆ ಕೈಗೊಂಡ ಶಿವಮೊಗ್ಗ ಗ್ರಾಮಾಂತರ ಪೊಲೀಸರಿಗೆ ಕೊಲೆಗಡುಕ ಹಾಲೇಶ್ ಸಿಕ್ಕಿಬಿದ್ದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Murder Husband and wife ಗ್ರಾಮಾಂತರ ಕೊಲೆಗಡುಕ