ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಧರಣಿ


22-12-2017 422

ಬೆಳಗಾವಿ: ಸಚಿವ ರಮೇಶ ಜಾರಕಿಹೊಳಿ ಒಡೆತನದ ಕಾರ್ಖಾನೆಯಿಂದ ರೈತರಿಗೆ ಕಬ್ಬಿನ ಹಣ ಬಾಕಿ ಹಿನ್ನೆಲೆ, ಬೆಳಗಾವಿಯ ‌ಜಿಲ್ಲಾಧಿಕಾರಿ ಕಚೇರಿಯ ಮುಂದೆ ರೈತರು ಧರಣಿ ಮುಂದುವರೆಸಿದ್ದಾರೆ. ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಸುಮಾರು 4 ಕೋಟಿಯಷ್ಟು ಹಣ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದ್ದು, ಕೂಡಲೇ ಹಣ ಬಿಡುಗಡೆ ಮಾಡುವಂತೆ ರೈತರು, ಎರಡು ದಿನದಿಂದ ಧರಣಿ ನಡೆಸಿದ್ದಾರೆ. ಬಾಕಿ ಹಣ ಬಿಡುಗಡೆ ಮಾಡಲೇಬೇಕೆಂದು ರೈತರು ಪಟ್ಟು ಹಿಡಿದು ಅಹೋರಾತ್ರಿ ಧರಣಿ ಮುಂದುವರೆಸಿ ಪ್ರತಿಭಟಿಸಿದ್ದಾರೆ. ಇನ್ನು ಇಂದು ಸಿಎಂ ಜೊತೆಗೆ ಕಬ್ಬು ಬೆಳಗಾರರ ಸಮಸ್ಯ ಕುರಿತು ಸಭೆ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.


ಒಂದು ಕಮೆಂಟನ್ನು ಬಿಡಿ