ಮೊಬೈಲ್ ನಲ್ಲಿ ಅಂಜನಿಪುತ್ರ ವ್ಯಕ್ತಿ ಸೆರೆ


21-12-2017 821

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿಪುತ್ರ ಚಲನಚಿತ್ರವನ್ನು ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ್ ಕುಮಾರ್ ಬಂಧಿತ ಆರೋಪಿ. ಬೆಂಗಳೂರಿನ ಓಟಿಸಿ ರಸ್ತೆಯ ಶಾರದಾ ಥಿಯೇಟರ್ ನಲ್ಲಿ ಅಂಜನಿಪುತ್ರ ಸಿನೆಮಾ ರಿಲೀಸ್ ಆಗಿತ್ತು. ಇನ್ನು ಚಿತ್ರ ಪ್ರದರ್ಶನದ ವೇಳೆ ಆನಂದ್ ಕುಮಾರ್ ಮೊಬೈಲ್ ಹಿಡಿದು ಚಿತ್ರವನ್ನು ವೀಡಿಯೋ ಮಾಡುತ್ತಿದ್ದ, ಇದನ್ನು ಗಮನಿಸಿದ ಅಲ್ಲೇ ಇದ್ದ ಒಬ್ಬರು ಪೊಲೀಸರಿಗೆ ಮಾಹಿತಿ ನೀಡಿ ದ್ದಾರೆ. ಕೂಡಲೆ ಸಿಲ್ವರ್ ಜೂಬ್ಲಿ ಪಾರ್ಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ವಿಚಾರಣೆಗೆ ಠಾಣೆಗೆ ಕರೆದೊಯ್ದಿದ್ದು, ವಿಚಾರಣೆ ವೇಳೆ ಹೆಂಡತಿಗೆ ತೋರಿಸೋ ದೃಷ್ಠಿಯಿಂದ ಚಿತ್ರ ಸೆರೆಹಿಡಿದಿರೋದಾಗಿ ಹೇಳಿದ್ದಾನೆ, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Puneeth Rajkumar Anjani Putra ಚಲನಚಿತ್ರ ಪ್ರದರ್ಶನ