ರಾಮ, ಕೃಷ್ಣ ಬಿಜೆಪಿ ಆಸ್ತಿನಾ?ಸಿಎಂ ಪ್ರಶ್ನೆ


21-12-2017 502

ಬೆಳಗಾವಿ: ಬೆಳಗಾವಿಯ ಗೋಕಾಕನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ  ಕಾಂಗ್ರೆಸ್ ಪಕ್ಷ ಬಲವಾಗಿದೆ, ಆಡಳಿತ ವಿರೋಧಿ ಅಲೆ ಇಲ್ಲ, ಬಿಜೆಪಿ ವಿರುದ್ಧದ ಅಲೆ ಇದೆ, ರಾಜ್ಯದ ಮೇಲೆ ಬಿಜೆಪಿ ನಾಯಕರ ಕಣ್ಣು ಬಿದ್ದಿದೆ ಎಂದ ಅವರು, ಅಮಿತ್ ಷಾ, ಮೋದಿ ಹೇಗಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ ಎಂದುರು. ರಾಜ್ಯದ ನಾಯಕರು ಮೋದಿ ಮೇಲೆ ಅವಲಂಬಿತರಾಗಿದ್ದಾರೆ, ಆದರೆ ರಾಜ್ಯದಲ್ಲಿ ಮೋದಿ ವರ್ಚಸ್ಸು ಇಲ್ಲ, ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುವುದಿಲ್ಲ, ಹಿಂದುತ್ವದ ನೆಪದಲ್ಲಿ ಮತ ಕೇಳುತ್ತಾರೆ ಎಂದು ಕಿಡಿಕಾರಿದರು.

ಹಿಂದುತ್ವವನ್ನು ಬಿಜೆಪಿಯವರು ಗುತ್ತಿಗೆ ಪಡೆದಿದ್ದಾರಾ? ನನ್ನ ಹೆಸರಿನಲ್ಲೇ ರಾಮ ಇಲ್ವಾ? ನಾನು ಹಿಂದು ಅಲ್ವಾ, ರಾಮ ಕೃಷ್ಣ ಇವರ ಆಸ್ತಿನಾ? ನಾವು ರಾಮನವಮಿ, ವಿವೇಕಾನಂದ ಜಯಂತಿ ಮಾಡುತ್ತೇವೆ ಎಂದು ಬಿಜೆಪಿ ವಿರುದ್ಧ ಕೆಂಡಾಮಂಡಲರಾದರು.

ಇದೇ ವೇಳೆ ಜೆಡಿಎಸ್ ವಿರುದ್ಧವೂ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದು, ಮುಂದಿನ ಬಾರಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರಕ್ಕೆ ಬರಲ್ಲ, ಮುಂದಿನ ಸಲವೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದರು. ಜೆಡಿಎಸ್ ನವರು ಅವಕಾಶವಾದಿಗಳು, ಕಾಂಗ್ರೆಸ್ ಜೊತೆಗೂ ಹೋಗ್ತಾರೆ, ಬಿಜೆಪಿ ಜತೆಗೂ ಹೋಗ್ತಾರೆ, ಜೆಡಿಎಸ್ ನವರಿಗೆ ಬದ್ಧತೆಯೇ ಇಲ್ಲ ಎಂದರು.

ಇನ್ನು ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ, ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೇರಲಿದೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಮೂಲಕ ರಾಹುಲ್ ಗಾಂಧಿಯವರಿಗೆ ಮೊದಲ ಕೊಡುಗೆ ನೀಡ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

siddaramaiah Election ರಾಹುಲ್ ಗಾಂಧಿ ಅಧಿಕಾರ