ಭಾರೀ ಚರ್ಚಗೆ ಗ್ರಾಸವಾದ ವೀಡಿಯೊ


21-12-2017 435

ಮಂಗಳೂರು: ಕಳ್ಳ ಯಾರು ಅಂದ್ರೆ ಮಗುವೊಂದು ಸಿಎಂ ಸಿದ್ದರಾಮಯ್ಯ ಫೋಟೊ ಕಡೆ ಬೊಟ್ಟು ಮಾಡಿ ತೋರಿಸುವ ವಿಡೀಯೊವೊಂದು ಕರಾವಳಿ ಭಾಗದಲ್ಲಿ ಸಖತ್ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಮಗುವೊಂದರ ವೀಡಿಯೊವನ್ನು ಮನೆಯವರೇ ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾರೆ ಎನ್ನಲಾಗಿದೆ. ಪತ್ರಿಕೆಯನ್ನು ಮಗು ಹಿಡಿದುಕೊಂಡು ಕುಳಿತಿರುತ್ತದೆ, ಆಗ ಮನೆಯವರಲ್ಲಿ ಓರ್ವ ಮೋದಿ ಎಲ್ಲಿ ಅಂತಾ ಕೇಳುತ್ತಾನೆ, ಆಗ ಮಗು ಪ್ರಧಾನಿ ನರೇಂದ್ರ ಮೋದಿ  ಭಾವಚಿತ್ರವನ್ನು ತೋರಿಸುತ್ತೆ. ನಂತರ ತುಳು ಭಾಷೆಯಲ್ಲಿ ಕಳ್ಳ ಎಲ್ಲಿ ತೋರಿಸು ಅಂತಾ ಕೇಳುತ್ತಾರೆ, ಆಗ ಆ ಮಗು ಪತ್ರಿಕೆಯನ್ನು ತಿರುಗಿಸಿ ಅಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊವನ್ನು ತೋರಿಸುತ್ತೆ. ಸದ್ಯ ಈ ವಿಡೀಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೀಗೆ ಮುಗ್ಧ ಮಗುವೊಂದನ್ನ ರಾಜಕೀಯ ವಿಚಾರಗಳಿಗೆ ಬಳಸಿಕೊಳ್ಳೋದು ಮಕ್ಕಳ ಹಕ್ಕು‌ ಕಾನೂನಿನ ಪ್ರಕಾರ ಅಪರಾಧವಾಗುತ್ತೆ, ಈ ಕಾರಣಕ್ಕಾಗಿ ಮಗುವಿನ ಪೋಷಕರ ವಿರುದ್ಧ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Siddaramaiah viral ಪ್ರಧಾನಿ ಅಪರಾಧ