ಗೋಡೆಗೆ ಗುದ್ದಿದ ಮೆಟ್ರೊ ರೈಲು


19-12-2017 716

ಪರೀಕ್ಷೆ ಸಲುವಾಗಿ ಸಂಚಾರ ನಡೆಸಿದ್ದ ಚಾಲಕ ರಹಿತ ದೆಹಲಿ ಮೆಟ್ರೊ ರೈಲುಗಾಡಿ, ಗೋಡೆಗೆ ಗುದ್ದಿರುವ ಘಟನೆ ನಡೆದಿದೆ. ಸರಿಯಾದ ಸಮಯಕ್ಕೆ ಬ್ರೇಕ್ ಹಾಕದ ಕಾರಣ, ನಿಗದಿತ ಸ್ಥಳಕ್ಕಿಂತ ಮುಂದಕ್ಕೆ ಚಲಿಸಿದ ರೈಲು, ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಮ್ಯಾಜೆಂಟಾ ಅಥವ ಕೆನ್ನೇರಳೆ ಮಾರ್ಗದಲ್ಲಿ ಓಡಿಸಲಾಗುತ್ತಿದ್ದ ಈ ರೈಲು, ಪ್ರಯೋಗಾರ್ಥವಾಗಿ ಚಲಿಸುತ್ತಿದ್ದು, ರೈಲಿನಲ್ಲಿ ಯಾವುದೇ ಪ್ರಯಾಣಿಕರೂ ಇರಲಿಲ್ಲ.

ಆದರೆ, ಬೆಂಗಳೂರು ಸೇರಿದಂತೆ ದೇಶದ ಇತರೆಡೆಯ ಮೆಟ್ರೊ ರೈಲುಗಳನ್ನು, ಚಾಲಕ ರಹಿತ ವ್ಯವಸ್ಥೆಯಲ್ಲಿ ಓಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ದೇಶದ ಪ್ರತಿಷ್ಠೆಯಂತಿರುವ ದೆಹಲಿ ಮೆಟ್ರೋದಲ್ಲೇ ಚಾಲಕ ರಹಿತ ರೈಲು ಸಂಚಾರ ಯಶಸ್ವಿಯಾಗದಿದ್ದರೆ, ಇತರೆಡೆಯೂ ಈ ವ್ಯವಸ್ಥೆ ಜಾರಿಗೆ ಬರುವುದು ಸದ್ಯಕ್ಕಂತೂ ಅನುಮಾನ.

 


ಒಂದು ಕಮೆಂಟನ್ನು ಬಿಡಿ