ವಿಮಾನವೇರಿದರೂ ಸಿಕ್ಕಿಬಿದ್ದ ಕಳ್ಳ…


19-12-2017 547

ದೆಹಲಿ ಏರ್‌ಪೋರ್ಟ್‌ನಲ್ಲಿನ ಅಂಗಡಿಯೊಂದರಲ್ಲಿ ಬ್ಯಾಗ್ ಕದ್ದ ಪ್ರಯಾಣಿಕ,  ವಿಮಾನವನ್ನೇರಿ ಪುಣೆಗೆ ಬಂದಿಳಿದಿದ್ದ. ಇನ್ನು ಮುಗಿಯಿತು, ನಾನು ಗೆದ್ದೆ ಅಂದುಕೊಂಡು, ಮನೆ ಕಡೆ ಹೆಜ್ಜೆ ಹಾಕುವಷ್ಟರಲ್ಲಿ, ಮೂವರು ಭದ್ರತಾ ಸಿಬ್ಬಂದಿ ಅವನನ್ನು ಸುತ್ತುವರಿದು ಪ್ರಶ್ನಿಸಿದರು. ಯಾರಿಗೂ ಗೊತ್ತಾಗದಂತೆ ಕಳ್ಳತನ ಮಾಡಿದ್ದೆ, ಎಂದುಕೊಂಡಿದ್ದ ಆ ವ್ಯಕ್ತಿ, ಇಷ್ಟು ಬೇಗ ತನ್ನ ಕಳ್ಳತನ ಗೊತ್ತಾಗಿಬಿಟ್ಟಿದ್ದಕ್ಕೆ ಕಕ್ಕಾಬಿಕ್ಕಿಯಾಗಿ ತಪ್ಪೊಪ್ಪಿಕೊಂಡ. ಅಷ್ಟಕ್ಕೇ ಎಲ್ಲಿ ಮುಗಿಯಿತು, 7 ಸಾವಿರ ರೂಪಾಯಿ ಬೆಲೆ ಬಾಳುವ ಬ್ಯಾಗ್ ಕದ್ದ ಆ ವ್ಯಕ್ತಿ, ಮತ್ತೆ ತನ್ನ ಜೇಬಿನಿಂದಲೇ ಹಣ ತೆತ್ತು, ವಿಮಾನದಲ್ಲಿ ದೆಹಲಿಗೆ ವಾಪಸ್ ಹೋಗಿ, ಆ ಬ್ಯಾಗ್ ಹಿಂದಿರುಗಿಸುವಂತೆ ಮಾಡಲಾಯಿತು. ಅಲ್ಲಿ ಈತನನ್ನು ಪೊಲೀಸರು ವಶಕ್ಕೆ ಪಡೆದರು, ಆದರೆ, ಬ್ಯಾಗ್ ಅಂಗಡಿಯವರು ಕಂಪ್ಲೇಂಟ್ ಕೊಡದೇ ಇದ್ದದ್ದರಿಂದ ಈತನನ್ನು ಬಿಟ್ಟು ಕಳುಹಿಸಲಾಯಿತು. ಒಟ್ಟಿನಲ್ಲಿ, ಕಳ್ಳತನ ಮಾಡಿದರೆ ಏನಾಗಬಹುದು ಅನ್ನುವುದನ್ನು ಈ ವ್ಯಕ್ತಿ ಸರಿಯಾಗಿಯೇ ತಿಳಿದುಕೊಂಡಂತಾಯ್ತು. ಇದು ಕಳೆದ ವಾರ ನಡೆದ ಘಟನೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Delhi Airport Shoplifter ವಿಮಾನ ಕಕ್ಕಾಬಿಕ್ಕಿ