ಇಂದಿರಾ ಕ್ಯಾಂಟೀನ್ ಗೆ ವಿರೋಧ


14-12-2017 412

ಬೆಂಗಳೂರು: ಬಿಜೆಪಿ ಕಾರ್ಪೊರೇಟರ್ ಪ್ರತಿಮಾ ರಮೇಶ್ ಅವರು, ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಪ್ರತಿಮಾ ರಮೇಶ್ ಕಾಮಾಕ್ಷಿಪಾಳ್ಯ ವಾರ್ಡ್ ನ ಪಾಲಿಕೆ ಸದಸ್ಯೆ, ಕಾಮಾಕ್ಷಿ ಪಾಳ್ಯ ವಾರ್ಡ್ ನಲ್ಲಿ, ಅನ್ಯ ವಾರ್ಡ್ ನ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗುತ್ತಿದೆ ಎಂದು, ಆರೋಪಿಸಿದ ಅವರು, ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಕಾವೇರಿಪುರಂ ವಾರ್ಡ್ ನಲ್ಲಿ ಅರಂಭವಾಗಬೇಕಿದ್ದ ಕ್ಯಾಂಟೀನ್ ನಮ್ಮ ವಾರ್ಡ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ, ಅಧಿಕಾರಿಗಳು ಮನಸೋ ಇಚ್ಚೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು. ಅಲ್ಲದೇ ಪಾಲಿಕೆ ಅಧಿಕಾರಿಗಳು ಕೂಡಾ ಹಟ ಬಿದ್ದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನು ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರ ಭದ್ರತೆಯಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ನಡೆಸಲಾಗುತ್ತಿದೆ. 


ಒಂದು ಕಮೆಂಟನ್ನು ಬಿಡಿ