ದೇವರೆದುರಷ್ಟೇ ನಿಶ್ಯಬ್ದ…!


14-12-2017 414

ಈಗಾಗಲೇ ಹಬ್ಬಿರುವ ವದಂತಿಗಳನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟಿನ ಹಸಿರುಪೀಠ, ಕಾಶ್ಮೀರದಲ್ಲಿರುವ ಅಮರನಾಥ್ ಗುಹೆ ಪ್ರದೇಶವನ್ನು ನಿಶ್ಯಬ್ದ ವಲಯ ಎಂದು ಘೋಷಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ಈ ಹಿಂದಿನ ವರದಿಗಳಂತೆ, ಹಿಮಪಾತ ತಪ್ಪಿಸಲು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವ ಸಲುವಾಗಿ ಅಮರನಾಥ್ ಗುಹೆ ಮತ್ತು ಸುತ್ತಲಿನ ಪ್ರದೇಶವನ್ನು ನಿಶ್ಯಬ್ದ ವಲಯ ಎಂದು ಪರಿಗಣಿಸುವಂತೆ ಹಸಿರುಪೀಠ ಹೇಳಿತ್ತು. ಆ ಬಗ್ಗೆ, ಇದೀಗ ಸ್ಪಷ್ಟೀಕರಣ ನೀಡಿರುವ ನ್ಯಾಯಮೂರ್ತಿ ಸ್ವತಂತ್ರ ಕುಮಾರ್  ನೇತೃತ್ವದ ಪೀಠ, ಹಿಮಲಿಂಗುವಿನ ಎದುರಿನಲ್ಲಷ್ಟೇ ಯಾವುದೇ ರೀತಿಯ ಸದ್ದು ಗದ್ದಲವಿರದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ. ಈ ಮೊದಲು ಹಸಿರು ಪೀಠದ ನೀಡಿದ್ದ ಆದೇಶಕ್ಕೆ, ವಿಶ್ವಹಿಂದೂ ಪರಿಷತ್ ಮತ್ತಿತರ ಹಿಂದೂ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಪರಿಸರ ಕಾರ್ಯಕರ್ತೆ ಗೌರಿ ಮೌಲೇಖಿ ಅನ್ನುವವರು, ಅಮರನಾಥ್ ಗುಹೆ ಪ್ರದೇಶದಲ್ಲಿ ಗೌಜು ಗದ್ದಲ ತಪ್ಪಿಸಬೇಕು ಎಂದು ಹಸಿರು ಪೀಠದ ಮೊರೆ ಹೋಗಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Amarnath cave Green Tribunal ಹಸಿರುಪೀಠ ನಿಶ್ಯಬ್ದ