ಡಬಲ್ ಮರ್ಡರ್ ಆರೋಪಿಗಳು ಅರೆಸ್ಟ್


14-12-2017 414

ವಿಜಯಪುರ: ವಿಜಯಪುರದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ನಗರದ, ನವರತ್ನ ಹೋಟೆಲ್ ಎದುರು ಇದೇ ತಿಂಗಳ 9 ರಂದು ಇಬ್ಬರನ್ನು ಹತ್ಯೆ ಮಾಡಲಾಗಿತ್ತು. ವಿಜಯಪುರ ನಗರದ ನಿವಾಸಿಗಳಾದ ಆಕೀಬ ಭಾಂಗಿ(21), ಮನ್ಸೂರ ಅಲಿ ಇನಾಂದಾರ್ (21), ಮಹ್ಮದ್ಜುಬೇರ್ ಟಕ್ಕಳಕಿ(21) ಬಂಧಿತ ಆರೋಪಿಗಳು. ಮದ್ಯ ಸೇವಿಸುವ ಸಲುವಾಗಿ ಅಪರಿಚಿತರಿಬ್ಬರನ್ನು ಹತ್ಯೆಗೈದು ಪರಾರಿಯಾಗಿದ್ದರು. ಪ್ರಕರಣ ತನಿಖೆ ಕೈಗೊಂಡ ಗೋಲ್ ಗುಂಬಜ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Double murder Arrest ಗೋಲ್ ಗುಂಬಜ್ ಮರ್ಡರ್