ಸುಳ್ಳು ಹೇಳಿ-ಕಾರ್ಯಕರ್ತರಿಗೆ ಈಶ್ವರಪ್ಪ ಕರೆ


13-12-2017 653

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಏಕೆ ಓಟು ಹಾಕಬೇಕು ಎಂದು ಜನರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಲು ನಿಮಗೆ ಗೊತ್ತಾಗದಿದ್ದರೆ ಏನಾದರೂ ಸುಳ್ಳುಗಳನ್ನು ಹೇಳಿ ಎಂದು, ಪಕ್ಷದ ಕಾರ್ಯಕರ್ತರಿಗೆ ಕೆ.ಎಸ್. ಈಶ್ವರಪ್ಪ ಕರೆ ಕೊಟ್ಟಿದ್ದಾರೆ. ‘ನಾವು ರಾಜಕಾರಣಿಗಳು, ಜನರು ಕೇಳುವ ಯಾವ ಪ್ರಶ್ನೆಗೂ ನಮಗೆ ಗೊತ್ತಿಲ್ಲ ಎಂದು ಹೇಳಬಾರದು, ನಾವು ಸುಳ್ಳುಗಳನ್ನೋ ಅಥವ ಏನಾದರೂ ಒಂದನ್ನು ಹೇಳಿ ಅವರನ್ನು ಸಮಾಧಾನಪಡಿಸಬೇಕು’ ಎಂದು ಕೊಪ್ಪಳದಲ್ಲಿ ಈಶ್ವರಪ್ಪನವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಬೋಧನೆ ಮಾಡಿದ್ದಾರೆ.  

ಅದು ಕಪ್ಪುಹಣ ವಾಪಸ್ ತರುವ ವಿಚಾರವಿರಲಿ, ನೋಟು ರದ್ದತಿಯಿಂದ ಆದ ಎಡವಟ್ಟುಗಳಾಗಲಿ ಪ್ರಧಾನಿ ಮೋದಿಯವರ ಅನೇಕ ಮಾತುಗಳು, ಪ್ರಸ್ತಾವನೆಗಳು ಕೇವಲ ಕಟ್ಟು ಕತೆ ಎಂಬ ಆರೋಪವಿದೆ. ಬಿಜೆಪಿಯವರೂ ತಮ್ಮ ನಾಯಕನಂತೆಯೇ ಸುಳ್ಳಿನ ಕಂತೆ ಕಟ್ಟುತ್ತಿದ್ದಾರೆ, ಎಂದು ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ. ಇದೀಗ, ರಾಜ್ಯ ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪನವರು ಹೇಳಿರುವ ಮಾತು, ಕಾಂಗ್ರೆಸ್ ಮತ್ತು ಇತರೆ ವಿಪಕ್ಷಗಳು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿದೆ ಎಂಬುದನ್ನು ಸಾಬೀತು ಮಾಡಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

K.S.Eshwarappa Ellection ವಿಧಾನಸಭಾ ರಾಜಕಾರಣಿ