'ಬಿಜೆಪಿಗೆ ಗುಜರಾತ್ ಕಳೆದುಕೊಳ್ಳುವ ಭಯ'


13-12-2017 550

ವಿಜಯಪುರ: ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಲು ಕೇಂದ್ರ ಸಚಿವ ಅನಂತಕುಮಾರ್ ಹೆಗೆಡೆ ಕಾರಣ ಎಂದು, ಮಾಜಿ ಸಚಿವ ವೀರಪ್ಪ ಮೊಯಿಲಿ ಹೇಳಿದ್ದಾರೆ. ವಿಜಯಪುರದಲ್ಲಿಂದು ಮಾತನಾಡಿದ ಅವರು, ಭಟ್ಕಳ ಜನರು ಒಳ್ಳೆಯವರು, ಆದ್ರೆ ಕೋಮುವಾದಿಗಳು ಅವರನ್ನ ಪ್ರಚೋದಿಸುತ್ತಿದ್ದಾರೆ ಎಂದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ನಾನು ಸಿಎಂ ಆಗಿದ್ದ ವೇಳೆ ಕೋಮುವಾದಿಗಳು ಭಟ್ಕಳದಲ್ಲಿ ದೊಡ್ಡ ಮಟ್ಟದ ಗಲಾಟೆ ನಡೆಸಿದ್ದರು, ಅನಂತಕುಮಾರ್ ಹೆಗಡೆ ಗಲಾಟೆ ಹಚ್ಚುವುದರಲ್ಲಿ ನಿಸ್ಸೀಮರು, ರಾಜ್ಯವನ್ನ ಕೋಮುವಾದಿಗಳು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಂದೂ ಕಾರ್ಯಕರ್ತರ ಹತ್ಯೆ ಎನ್.ಐ.ಎ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರಿಗೆ ಎನ್.ಐ.ಎ ಮೇಲೆ ನಂಬಿಕೆ ಇರಬೇಕು, ಎನ್.ಐ.ಎ ಬಿಜೆಪಿ ಪರವಾಗಿದೆ ಅನ್ನೋ ನಂಬಿಕೆ ಬಂದಿರಬೇಕು, ಯಾವುದೇ ತನಿಖೆ ನಡೆಸಿದರು ನಮ್ಮ ಅಭ್ಯಂತರವಿಲ್ಲ, ನಾವೂ ಹಿಂದೂಗಳು, ಆದರೆ ಬಿಜೆಪಿ ಅವರ ರೀತಿ ಕೋಮುವಾದ ಮಾಡಲ್ಲ ಎಂದಿದ್ದಾರೆ.

ಇನ್ನು ಗುಜಾತ್ ಚುನಾವಣೆ ವಿಚಾರವಾಗಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹತಾಶೆ ಭಾವನೆ ಬಂದಿದೆ, ಗುಜರಾತ್ ನಲ್ಲಿ ಅಧಿಕಾರ ಕಳೆದುಕೊಳ್ತೇವೆಂದು ಭೀತಿ, ಭಯ ಬಂದಿದೆ ಎಂದರು. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಾಮ ಮಾರ್ಗ ತೆಗೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಹಠ ಹಾಗೂ ಛಲದಿಂದ ಕಾರ್ಯ ಮಾಡ್ತಿದ್ದಾರೆ, ಆದರೆ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.


ಒಂದು ಕಮೆಂಟನ್ನು ಬಿಡಿ