ವ್ಯಕ್ತಿ ಕತ್ತು ಕೊಯ್ದು ಭೀಕರ ಕೊಲೆ


13-12-2017 373

ಬೆಂಗಳೂರು: ಬಿಟಿಎಂ ಲೇಔಟ್ ಬಾರ್ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ಪಿ.ಜಿ ಹಾಸ್ಟೆಲ್ ಮಾಲೀಕರೊಬ್ಬರನ್ನು ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಕೊಲೆಗೈದಿರುವ ದುರ್ಘಟನೆ ನಡೆದಿದೆ. ಕೊಲೆಯಾದವರನ್ನು ಬಿಟಿಎಂ ಲೇಔಟ್ ಬಾರ್ ರಸ್ತೆಯಲ್ಲಿ ಪಿಜಿ ನಡೆಸುತ್ತಾ ಅದೇ ಪಿಜಿಯ ನೆಲಮಹಡಿಯಲ್ಲಿ ವಾಸಿಸುತ್ತಿದ್ದ ಮಾಲೀಕ ತಿರುಮಲ ರೆಡ್ಡಿ (58) ಎಂದು ಗುರುತಿಸಲಾಗಿದೆ. ತಿರುಮಲ ರೆಡ್ಡಿ ಅವರ ಪುತ್ರ ಮತ್ತೊಂದು ಪಿಜಿ ನಡೆಸುತ್ತಿದ್ದು ರಾತ್ರಿ 10ಕ್ಕೆ ತೆರಳಿದ್ದರು. ಬೆಳಿಗೆ 7ರ ವೇಳೆ ಪುತ್ರ ಬಂದು ನೋಡಿದಾಗ ತಿರುಮಲರೆಡ್ಡಿ ಅವರ ಮೇಲೆ ಬೆಡ್‍ಶೀಟ್ ಹೊದಿಸಲಾಗಿತ್ತು.

ಅದನ್ನು ತೆಗೆದು ನೋಡಿದಾಗ ತಿರುಮಲರೆಡ್ಡಿ ರಕ್ತದ ಮಡುಗಟ್ಟಿರುವುದು ಕತ್ತು ಕೊಯ್ದಿರುವುದು ಕಂಡುಬಂದಿದೆ, ಕೊಡಲೇ ಮೈಕೋ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಇನ್ಸ್ ಪೆಕ್ಟರ್ ಅಜಯ್ ಪರಿಶೀಲನೆ ನಡೆಸಿದ್ದಾರೆ ಪಿ.ಜಿ.ಯಲ್ಲಿ ಅಡುಗೆ ಮಾಡಿಕೊಂಡಿದ್ದ ಅಡಿಗೆ ಭಟ್ಟ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದ್ದು. ನಿನ್ನೆ ರಾತ್ರಿ  ಹಣಕಾಸಿನ ವಿಚಾರಕ್ಕೆ ಅಡಿಗೆ ಭಟ್ಟ ಹಾಗೂ ಮಾಲೀಕನ ನಡುವೆ ವಾಗ್ವಾದ ನಡೆದಿದ್ದು, ಅದೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಪಿಜಿಯಲ್ಲಿ 40ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ವಿದ್ಯಾರ್ಥಿಗಳು ತಂಗಿದ್ದರು. ಪ್ರಕರಣ ದಾಖಲಿಸಿರುವ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Horrific murder Hostel ಕತ್ತು ಕೊಯ್ದು ದುಷ್ಕರ್ಮಿ