ಬೆಂಕಿಯಲ್ಲಿ ಬೆಂದು ಬದುಕುಳಿದ ಮಹಿಳೆ


13-12-2017 428

ವಿಜಯಪುರ: ಮಹಿಳೆಯೊಬ್ಬರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಅಮಾನವೀಯ ಘಟನೆಯು ವಿಜಯಪುರ ಜಿಲ್ಲೆಯ ಯಲ್ಲಮ್ಮನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಗಂಡನ ಮನೆಯವರು, ವರದಕ್ಷಿಣೆ ಕಿರುಕುಳ ನೀಡಿ ಮಹಿಳೆ ಕೊಲೆಗೆ ಯತ್ನಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡ ಮಹಿಳೆಯನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುವರ್ಣ ರಾಮಣ್ಣ ಅಮಾತಿಗೌಡರ್(27) ಬೆಂಕಿಗಾಹುತಿಯಾಗಿ ಬದುಕುಳಿದ ಮಹಿಳೆ. ಗಂಡ, ಮೈದುನ ಮತ್ತು ಅತ್ತೆ, ಮಾವನಿಂದ ಈ ದುಷ್ಕೃತ್ಯ ಎಸಗಿದ್ದಾರೆ, ವರದಕ್ಷಣೆ ಕಿರಕುಳ ನೀಡಿ ಕೊಲೆಗೆ ಯತ್ನಿಸಿದ್ದಾರೆ ಎಂದು, ಸುವರ್ಣ ತವರು ಮನೆಯವರ ಆರೋಪಿಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ