ಯುವತಿಗೆ ಬಸ್ ನಲ್ಲಿ ಲೈಂಗಿಕ ಕಿರುಕುಳ


12-12-2017 671

ತುಮಕೂರು: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಒಬ್ಬರು ಬಸ್ಸಿನಲ್ಲೇ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅಲ್ಲದೇ ಈ ಕುರಿತು ಬಸ್ಸಿನಲ್ಲಿದ್ದ ಸಹಪ್ರಯಾಣಿಕರೇ ಕಂಡಕ್ಟರ್ ನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ವಿಭಾಗಕ್ಕೆ ಸೇರಿದ ಕೆಎಸ್ಆರ್ ಟಿಸಿ ಬಸ್ ಇದಾಗಿದ್ದು, ಇದರ ನಿರ್ವಾಹಕ ಜವಾರ್ ಅಹಮದ್, ಯುವತಿಗೆ ಕಿರುಕುಳ ನೀಡಿದ್ದಾನೆ. ಕೆಲಸದ‌ ನಿಮಿತ್ತ ಹಾಸನಕ್ಕೆ ತೆರಳಿ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ಯುವತಿಯೊಂದಿಗೆ ಕಂಡಕ್ಟರ್, ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿಯು ಬಳ್ಳಾರಿ ಮೂಲದ ರೇಖಾ ಎನ್ನಲಾಗಿದೆ. ಹಾಸನದಿಂದ ಬೆಂಗಳೂರಿರಿಗೆ ಬರುತ್ತಿದ್ದ ವೇಳೆ, ಸೀಟು ಸಿಗದ ಕಾರಣ ನಿರ್ವಾಹಕನ ಪಕ್ಕದಲ್ಲಿ ಯವತಿ ಕುಳಿತಿದ್ದಳು. ಇದನ್ನೇ ದುರುಪಯೋಗ ಪಡಿಸಿಕೊಂಡ ಕಂಡಕ್ಟರ್ ಜವಾರ್ ಅಹಮದ್ ಯುತಿಯೊಂದಿಗೆ ಅಸಭ್ಯವಾಗಿ ವರ್ತಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ. ಇದನ್ನು ವಿರೋಧಿಸಿದ ಯುವತಿ ಕಿರುಚಿಕೊಂಡಿದ್ದಾಳೆ ಈ ವೇಳೆ ಈತನ ದುಷ್ಕೃತ್ಯವನ್ನು ಯುವತಿ ವಿವರಿಸಿದ್ದು, ಕಂಡಕ್ಟರ್ ಗೆ ಗೂಸ ನೀಡಿದ ಸಹ ಪ್ರಯಾಣಿಕರು, ಕುಣಿಗಲ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Sexual harassment KSRTC ಕುಣಿಗಲ್ ಹಿಗ್ಗಾಮುಗ್ಗ