‘ಬಿಜೆಪಿ ಲಿಂಗಾಯತ ವಿರೋಧಿ ಪಕ್ಷ’- ಪಾಟೀಲ


11-12-2017 457

ಬೆಳಗಾವಿ: ಬಿಜೆಪಿ ಲಿಂಗಾಯತ ವಿರೋಧಿ ಪಕ್ಷ, ಬಿಜೆಪಿ ಅವರು ತಪ್ಪು ಮಾಡುತ್ತಿದ್ದಾರೆ, ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಬೆಳಗಾವಿಯ ಚಿಕ್ಕೋಡಿಯ ಹುಕ್ಕೇರಿಯಲ್ಲಿ ಬಸಗೌಡ ಪಾಟೀಲ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರದಲ್ಲಿ ಮಾತನಾಡಿದ ಅವರು, ಲಿಂಗಾಯತ ಹೋರಾಟಕ್ಕೆ ಬಿಜೆಪಿಯ ಅನೇಕ ಶಾಸಕರು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರ, ಅವರ ಟಿಕೆಟ್ ತಪ್ಪುವದಾದ್ರೆ ಅವರು ಹೆಸರು ನಾನು ಹೇಳುವದಿಲ್ಲ ಎಂದರು.

ಬಿಜೆಪಿಯಲ್ಲಿದ್ದುಕೊಂಡೇ ಎಲ್ಲ ಲಿಂಗಾಯತ  ರ‍್ಯಾಲಿಗಳಿಗೆ ಅನೇಕ ಮುಖಂಡರು ಒಳಗಿದ್ದು ಸಹಾಯ ಮಾಡಿದ್ದಾರೆ, ಶಾಸಕ ಉಮೇಶ ಕತ್ತಿ ಹೇಳಿದ ಹಾಗೆ ಬಹಳಷ್ಟು ನಾಯಕರನ್ನು ಬಿಜೆಪಿ ಪಕ್ಷದವರು ಹಿಡಿದಿಟ್ಟುಕೊಂಡಿದ್ದಾರೆ ಎಂದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

M. B. Patil lingayat ವಿರೋಧ ಪಕ್ಷ ಹುಕ್ಕೇರಿ