ನಗರದಲ್ಲಿ ನೈಜೀರಿಯನ್‍ ಪ್ರಜೆ ಬಂಧನ


09-12-2017 464

ಬೆಂಗಳೂರು: ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್‍ ಪ್ರಜೆಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 41 ಗ್ರಾಂ ಕೊಕೇನ್ ಸೇರಿ 4 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನೈಜೀರಿಯಾದ ಎನಿಗು ರಾಜ್ಯದ ಒಬಿಯೊರನಾಥ್(34) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 4 ಲಕ್ಷ ಮೌಲ್ಯದ 41 ಗ್ರಾಂ ಕೊಕೇನ್, 4 ಮೊಬೈಲ್‍ಗಳು, ಹೋಂಡಾ ಸ್ಕೂಟರ್, 2 ಲ್ಯಾಪ್‍ಟಾಪ್‍ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು ಹೆಣ್ಣೂರಿನ ತಿಮ್ಮಯ್ಯ ಗೌಡ ಲೇಔಟ್‍ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದು, ಅಕ್ರಮವಾಗಿ ಕೊಕೇನ್ ಮಾರಾಟ ದಂಧೆಯಲ್ಲಿ ತೊಡಗಿದ್ದ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ವೀಸಾ ನಿಯಮ ಉಲ್ಲಂಘಿಸಿ ನಗರದಲ್ಲಿ ನೆಲೆಸಿ, ಕೊಕೇನ್ ಮಾರಾಟದಲ್ಲಿ ತೊಡಗಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Nigerian cocaine-drugs ಮಾದಕ ವಸ್ತು ನೈಜೀರಿಯನ್‍