ಬಾಣಸವಾಡಿಯ ಹೊರವರ್ತುಲರಸ್ತೆಯಲ್ಲಿ ಅಪಘಾತ


12-04-2017 838

ಬೆಂಗಳೂರು,ಏ.12-ಬಾಣಸವಾಡಿಯ ಹೊರವರ್ತುಲರಸ್ತೆಯಲ್ಲಿ ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದು ವೇಗವಾಗಿ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಯುವಕನೋರ್ವ ಆಯತಪ್ಪಿ ಬಿದ್ದು ಗಾಯಗೊಂಡರೆ ಹಿಂದೆ ಕುಳಿತಿದ್ದ ಆತನ ಸ್ನೇಹಿತೆ ದಾರುಣವಾಗಿ ಮೃತಪಟ್ಟಿದ್ದಾರೆ.
ಕಮ್ಮನಹಳ್ಳಿಯ ವಿನಿತಾ ವಿಶಾಲ್(21)ಮೃತಪಟ್ಟರೆ,ಟಿಸಿ ಪಾಳ್ಯದ ಆಶೋಕ್(24)ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತ ಪ್ರಾಣಾಪಾಯದಿಂದ ಪಾರಾಗಿ ಮತ್ತೊಬ್ಬ ಸಾವಿಗೆ ಕಾರಣನಾಗಿದ್ದಾನೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಶೋಕ್ ರಾತ್ರಿ 8ರ ವೇಳೆ ಕಂಠಪೂರ್ತಿ ಕುಡಿದು ಕಾಲ್‍ಸೆಂಟರ್‍ನಲ್ಲಿ ಕೆಲಸಮಾಡುತ್ತಿದ್ದ ಸ್ನೇಹಿತೆ ವಿನಿತಾ ವಿಶಾಲ್ ಅವರನ್ನು ಸ್ಕೂಟಿ ಸ್ಕೂಟರ್‍ನಲ್ಲಿ ಕೂರಿಸಿಕೊಂಡು ಕಮ್ಮನಹಳ್ಳಿಯಿಂದ ಸಿಸಿ ಪಾಳ್ಯದ ಕಡೆಗೆ ವೇಗವಾಗಿ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಹೊರವರ್ತುಲರಸ್ತೆಯ ಹೊರಮಾವು ಕೆಳಸೇತುವೆ ರಸ್ತೆಯಲ್ಲಿ ಆಯತಪ್ಪಿ ಬಿದ್ದು ಹೆಲ್ಮೆಟ್ ಧರಿಸಿದ ಇಬ್ಬರು ಕೆಳಗೆ ಬಿದ್ದು ಗಾಯಗೊಂಡರು ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ವಿನಿತಾ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಸರಿಯಾಗಿ ನಿಂತುಕೊಳ್ಳಲಾರದಷ್ಟು ಮದ್ಯಸೇವಿಸಿದ್ದ ಆಶೋಕ್ ಚಿಕಿತ್ಸೆ ಪಡೆಯುತ್ತಿದ್ದು ಆಪಾಯದಿಂದ ಪಾರಾಗಿದ್ದಾನೆ ಪ್ರಕರಣ ದಾಖಲಿಸಿರುವ ಬಾಣಸವಾಡಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
 

Links :ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

ಬಾಣಸವಾಡಿಯ ಹೊರವರ್ತುಲರ 1 1 1