ಕಾಂಗ್ರೆಸ್ ತ್ಯಜಿಸಿ, ಜೆಡಿಎಸ್ ಸೇರ್ಪಡೆ ಹಿನ್ನೆಲೆ ಮಂಡ್ಯದಲ್ಲಿ ಎಲ್.ಆರ್.ಶಿವರಾಮೇಗೌಡ ಹೇಳಿಕೆ


12-04-2017 679

ಮಂಡ್ಯ:- ಶಿವರಾಮೇಗೌಡ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ. ಏಪ್ರಿಲ್ ೧೦ ರಂದು ಕಾಂಗ್ರೆಸ್ ತ್ಯಜಿಸಿ, ಜೆಡಿಎಸ್ ಸೇರ್ಪಡೆಗೊಂಡಿದ್ದ ಶಿವರಾಮೇಗೌಡ. ನಾನು ಮತ್ತು ಸುರೇಶ್ ಗೌಡ ಇಬ್ಬರೂ ಜೆಡಿಎಸ್ ಸೇರಿದ್ದೇವೆ. ಜೆಡಿಎಸ್ ನಿಂದ ಬಿಟ್ಟು ಹೋದವರು(ಚಲುವನಾರಾಯಣಸ್ವಾಮಿ) ಏಪ್ರಿಲ್ ೧೪ ರಂದು ಸಮಾವೇಶ ಮಾಡುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಾಗಮಂಗಲದಲ್ಲಿ ಜಾತ್ಯಾತೀತ ಜನತಾದಳದ ಬೃಹತ್ ಸಮಾವೇಶ ಮಾಡುತ್ತೇವೆ. ದೇವೇಗೌಡರು, ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯುತ್ತೆ. ಮಂಡ್ಯದಲ್ಲಿ ನಾನು ಕಾಂಗ್ರೆಸ್ ಚೆನ್ನಾಗಿ ಬಲ್ಲೆ. ನೆಲ, ಜಲ, ಭಾಷೆ ಬಗ್ಗೆ ಹೋರಾಟ ಮಾಡಲು ಪ್ರಾದೇಶಿಕ ಪಕ್ಷ ಮುಖ್ಯ. ಅದಕ್ಕಾಗಿ ರೈತರ ಪಕ್ಷ, ಮಣ್ಣಿನ ಮಕ್ಕಳ ಪಕ್ಷ ಕ್ಕೆ ಸೇರಿದ್ದೇನೆ. ಸೂರ್ಯ ಹುಟ್ಟಿ, ಮುಳುಗೋದು ಎಷ್ಟು ಸತ್ಯವೋ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದು ಅಷ್ಟೇ ಸತ್ಯ. ಜಿಲ್ಲೆಯಲ್ಲಿ ಏಳು ಸ್ಥಾನಗಳನ್ನೂ ಜೆಡಿಎಸ್ ಗೆಲ್ಲುತ್ತೆ. ನಾನು ಸನ್ಯಾಸಿಯಲ್ಲ. ನಮ್ಮಿಬ್ಬರನ್ನ ಮೇಲ್ಮನೆ ಅಥವಾ ಕೆಳಮನೆಗೆ ಕಳಿಸೋದು ಸತ್ಯ ಎಂದು ದೇವೇಗೌಡರು ಭರವಸೆ ನೀಡಿದ್ದಾರೆ. ಸುರೇಶ್ ಗೌಡ ಮತ್ತು ನಾನು ಒಟ್ಟಾಗಿ ಜೆಡಿಎಸ್ ಪಕ್ಷ ಕಟ್ಟುತ್ತೇವೆ.
 

Links :