ಕುಖ್ಯಾತ ಅಂತರರಾಜ್ಯ ಕಳ್ಳನ ಬಂಧನ


06-12-2017 243

ಬೆಂಗಳೂರು: ಮನೆ ಕಳವು ಮಾಡುತ್ತಿದ್ದ ಅಂತರರಾಜ್ಯ ಕುಖ್ಯಾತ ಕಳ್ಳನೊಬ್ಬನನ್ನು ಸಂಪಿಗೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿಯ ಬಸವಾಪುರದ ನಾರಾಯಣಸ್ವಾಮಿ (45) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 190 ಗ್ರಾಂ ಚಿನ್ನಾಭರಣಗಳು ಸೇರಿ ಲಕ್ಷಾಂತರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಆರೋಪಿಯು ಬಾಗಲೂರಿನಲ್ಲಿ 3, ಸಂಪಿಗೆ ಹಳ್ಳಿಯಲ್ಲಿ 2, ಅಮೃತೂರಿನಲ್ಲಿ 4, ಗುಬ್ಬಿಯಲ್ಲಿ 2 ಸೇರಿ 15ಕ್ಕೂ ಹೆಚ್ಚು ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ನೆರೆಯ ಆಂಧ್ರದಲ್ಲೂ ಆರೋಪಿ ವಿರುದ್ಧ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದರೂ ಹಳೆ ಚಾಳಿ ಮುಂದುವರೆಸಿದ್ದ. ಸಂಪಿಗೆ ಹಳ್ಳಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

inter state Notorious thief ಡಿಸಿಪಿ ಕಾರ್ಯಾಚರಣೆ