ವಿಕಲ ಚೇತನ ಬಾಲಕ ನಾಪತ್ತೆ


06-12-2017 331

ಬೆಂಗಳೂರು: ವಿಕಲ ಚೇತನ ಬಾಲಕನೊರ್ವ ಕಾಣೆಯಾಗಿರುವ ಘಟನೆ ನಗರದ ಹೆಣ್ಣೂರು ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 8ವರ್ಷದ ವರುಣ ಕಾಣೆಯಾಗಿರುವ ಬಾಲಕ. ನಗರದ ಅಂಗವಿಕಲ ಶಾಲೆಯೊಂದರಲ್ಲಿ ಕಲಿಯುತ್ತಿದ್ದು, ಕಳೆದ ಒಂದು ವಾರದ ಹಿಂದೆ ಕಾಣೆಯಾಗಿದ್ದಾನೆ. ಕೊಪ್ಪಳ ಮೂಲದ ಬಾಲಕನಾದ ವರುಣ್, ಕಳೆದ 1ವರ್ಷದಿಂದ ಶಾಲಾಶಿಕ್ಷಯಿಯೊಬ್ಬರ ಮನೆಯಲ್ಲಿ ವಾಸವಿದ್ದು, ಅಂಗವಿಕಲ‌ರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ ಒಂದು ವಾರದ ಹಿಂದೆ ಬಾಲಕ ಮನೆಯಿಂದ ಹೊರಹೋಗಿದ್ದು, ಬಾಲಕ ಮನಬಿಟ್ಟು ಹೊರಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

physically challenge Kidnap ವಿಕಲ ಚೇತನ ವ್ಯಾಸಂಗ