ಲಾರಿ ಡಿಕ್ಕಿ ವ್ಯಕ್ತಿ ಸಾವು


05-12-2017 733

ಬಾಗಲಕೋಟೆ: ಪಾದಚಾರಿ ದಂಪತಿಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಪತಿ ಸಾವನ್ನಪ್ಪಿದ್ದು, ಪತ್ನಿಗೆ ಗಂಭೀರ ಗಾಯಗಳಾಗಿರುವ ಘಟನೆಯು ಬಾಗಕೋಟೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 50ರ ಚಿಕ್ಕಕೊಡಗಲಿ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಯಮನೂರು(28)ಸ್ಥಳದಲ್ಲೇ ಮೃತಪಟ್ಟಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿ ತನುಜಾಗೆ ಸಾಮಾನ್ಯಗಾಯಗಳಾಗಿದ್ದು, ಪಾರಾಗಿದ್ದಾರೆ. ಇವರನ್ನು ಇಳಕಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಸ್ಥಾನಕ್ಕೆಂದು ಹೊರಟಿದ್ದ, ದಂಪತಿಗಳಿಗೆ ದಾರಿ ಮಧ್ಯೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯಮನೂರು ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ಇಳಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಒಂದು ಕಮೆಂಟನ್ನು ಬಿಡಿ