ಹಣಕ್ಕಾಗಿ ಪ್ರಾಣ ಕಳೆದುಕೊಂಡ ಎಂಜಿನಿಯರ್

ಬೆಂಗಳೂರು: ಟ್ಯೂಷನ್ಗೆ ಸೇರಿಸಿದ್ದ ಮಗನ ಡೊನೇಷನ್ ಹಣವನ್ನು ವಾಪಸ್ ಕೊಡದ ಮಾಲೀಕನನ್ನು ಹೆದರಿಸಲು ಹೋದ ಗಾಯಗೊಂಡಿದ್ದ ಸಾಫ್ಟ್ ವೇರ್ ಎಂಜಿನಿಯರ್ ರಿತೇಶ್ಕುಮಾರ್ ಎನ್ನುವರು ಮೃತಪಟ್ಟಿರುವ ದುರ್ಘಟನೆ ಜೆಪಿನಗರದ 2ನೇ ಹಂತದಲ್ಲಿ ನಡೆದಿದೆ.
ಕಳೆದ ನ.29ರ ಬುಧವಾರ ಟ್ಯುಟೋರಿಯಲ್ ಮುಂಭಾಗ ಪೆಟ್ರೋಲ್ ಸುರಿದುಕೊಂಡು ಅಚಾನಕ್ ಬೆಂಕಿ ಹತ್ತಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಹೆಚ್ಎಎಲ್ನ ಎಜಿ ಕಂಪನಿಯ ಸಾಫ್ಟ್ ವೇರ್ ಎಂಜಿನಿಯರಾದ ರಿತೇಶ್ಕುಮಾರ್(35)ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಶೇ18ರಷ್ಟು ಸುಟ್ಟ ಗಾಯಗಳಾಗಿರುವ ಟ್ಯುಟೋರಿಯಲ್ ಮಾಲೀಕ ಆದಿತ್ಯ ಬಜಾಜ್ಗೆ ಅವರು ಚಿಕಿತ್ಸೆ ಪಡೆಯುತ್ತಿದ್ದು ಪ್ರಣಾಪಾಯದಿಂದ ಪರಾಗಿದ್ದಾರೆ.
ಪಾಟ್ನಾ ಮೂಲದ ರಿತೇಶ್ ಕುಮಾರ್ ತಮ್ಮ 7 ವರ್ಷದ ಮಗನನ್ನು ಜೆಪಿ ನಗರದ 2ನೇ ಹಂತದ ಆದಿತ್ಯ ಟ್ಯುಟೋರಿಯಲ್ಸ್ ನಲ್ಲಿ 4 ತಿಂಗಳ ಹಿಂದೆ ಟ್ಯೂಷನ್ಗೆ ಎರಡೂವರೆ ಲಕ್ಷ ಡೊನೇಷನ್ ಕೊಟ್ಟು ಕಳುಹಿಸುತ್ತಿದ್ದರು. ಕೆಲ ದಿನಗಳು ಮಾತ್ರ ಟ್ಯೂಷನ್ಗೆ ಕಳುಹಿಸಿ ನಂತರ ನಿಲ್ಲಿಸಲಾಗಿತ್ತು. ಬೇರೆ ಕಡೆ ಮಗನನ್ನು ಕಳುಹಿಸಲು ಆದಿತ್ಯ ಟ್ಯುಟೋರಿಯಲ್ಸ್ ಗೆ ಡೊನೇಷನ್ ನೀಡಿದ್ದ, ಎರಡೂವರೇ ಲಕ್ಷ ಹಣವನ್ನು ವಾಪಸ್ ಕೊಡುವಂತೆ ಆದಿತ್ಯ ಬಜಾಜ್ ಅವರನ್ನು ಕೇಳಿದ್ದ ರಿತೇಶ್ ಕುಮಾರ್, ಅದರಲ್ಲಿ ಶೇ. 50ರಷ್ಟು ಹಣ ವಾಪಸ್ ಪಡೆದುಕೊಂಡಿದ್ದರು.
ಉಳಿದ ಹಣವನ್ನು ಕೊಡುವಂತೆ ರಿತೇಶ್ ಕುಮಾರ್ ಹೇಳಿ ಆದಿತ್ಯಬಜಾಜ್ ಜೊತೆ ಮೊಬೈಲ್ನಲ್ಲೇ ಜಗಳ ಮಾಡಿಕೊಂಡಿದ್ದರು. ಕಳೆದ ನವೆಂಬರ್ 29 ರಂದು ಟ್ಯೂಟೋರಿಯಲ್ ಬಳಿ ಬಂದ ರಿತೇಶ್ ಕುಮಾರ್, ಕೈಯಲ್ಲಿ ಪೆಟ್ರೋಲ್ ತುಂಬಿದ್ದ ಬಾಟಲ್ ಹಿಡಿದುಕೊಂಡು ಬಂದು ಹಣ ವಾಪಸ್ ಕೊಡದಿದ್ದರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಹೆದರಿಸಿ ಮೈ ಮೇಲೆ ಸ್ವಲ್ಪ ಸುರಿದು ಕೊಂಡಿದ್ದಾರೆ .
ಬೆಂಕಿ ಪೊಟ್ಟಣವನ್ನು ಆದಿತ್ಯಬಜಾಜ್ಗೆ ಕೊಡಲು ಹೋಗಿದ್ದು, ಆತ ಬೆಂಕಿ ಹಚ್ಚದಿದ್ದಾಗ ರಿತೇಶೇ ಬೆಂಕಿಕಡ್ಡಿ ಗೀರಿದ್ದಾನೆ. ಕೂಡಲೇ ಬೆಂಕಿ ಹತ್ತಿಕೊಂಡಿದ್ದು, ಉಲ್ಲನ್ ಕೋಟ್ ಧರಿಸಿದ್ದ ರಿತೇಶ್ ಅವರ ಮೈ-ಕೈಗೆಲ್ಲ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಬೆಂಕಿ ನಂದಿಸಲು ಹೋದ ಆದಿತ್ಯಾಗೆ ಕೂಡ ಬೆಂಕಿ ತಗುಲಿದೆ. ಸ್ಥಳೀಯರು ಬೆಂಕಿ ನಂದಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸದರಾದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ರಿತೇಶ್ ಮೃತಪಟ್ಟಿದ್ದಾರೆ. ಜೆಪಿನಗರ ಪೊಲೀಸ್ ಇನ್ಸ್ ಪೆಕ್ಟರ್ ಹಿತೇಂದ್ರ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
ಒಂದು ಕಮೆಂಟನ್ನು ಬಿಡಿ