ಪತ್ನಿ ಕೊಲೆ ಮಾಡಿ ಜಿಲ್ಲಾಸ್ಪತ್ರೆಗೆ ಎಸೆದ ಪತಿ


05-12-2017 397

ಯಾದಗಿರಿ: ಪತ್ನಿಯನ್ನು ಕೊಲೆ ಮಾಡಿ ಜಿಲ್ಲಾಸ್ಪತ್ರೆಗೆ ಶವ ತೆಗೆದುಕೊಂಡ ಬಂದ ಪತಿ, ಶವವನ್ನು ಆಸ್ಪತ್ರೆಯಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆಯು ಯಾದಗಿರಿಯಲ್ಲಿ ನಡೆದಿದೆ. ಕಳೆದ ಮೇ ತಿಂಗಳಲ್ಲಿ ಪ್ರೇಮ ವಿವಾಹವಾಗಿದ್ದ ಆರೋಪಿ ವೆಂಕಟೇಶ, ಬೆಂಗಳೂರ ಗಾರ್ಮೇಂಟ್ಸ್ ನಲ್ಲಿ  ಕೆಲಸ ಮಾಡುವಾಗ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಶಾಂತಮ್ಮನ ಮತ್ತು ವೆಂಕಟೇಶ್ ನಡುವೆ ಪ್ರೇಮವಾಗಿತ್ತು. ಅದರಂತೆಯೇ ಪ್ರೇಮ ವಿವಾಹವು ಆಗಿತ್ತು. ಆದರೆ ಶಾಂತಮ್ಮಳಿಗೆ ಮೊದಲೇ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ.

ಇವರಿಬ್ಬರ ಮಧ್ಯೆ ಕೌಟುಂಬಿಕ ಕಲಹವಿತ್ತು,  ನಿನ್ನೆ ರಾತ್ರಿ ಮನೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡ ದಂಪತಿ, ಜಗಳ ವಿಕೋಪಕ್ಕೆ ತಿರುಗಿ, ಶಾಂತಮ್ಮನ ಕೊಲೆಯಲ್ಲಿ ಅಂತ್ಯವಾಗಿದೆ. ಅಲ್ಲದೇ ಕೊಲೆ ಮಾಡಿ ಬೈಕ್ ಮೇಲೆ ಶವ ಹೊತ್ತು ತಂದು, ಜಿಲ್ಲಾಸ್ಪತ್ರೆಯಲ್ಲಿ ಬಿಸಾಕಿ ಹೋಗಿದ್ದಾನೆ ಪಾಪಿ ಪತಿ. ಶವ ಹೊತ್ತು ತರುವ ದೃಶ್ಯ ಜಿಲ್ಲಾಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಣದಾಸೆಗಾಗಿ ಮಗಳನ್ನು ವೆಂಕಟೇಶ ಕೊಲೆ ಮಾಡಿದ್ದಾನೆಂದು ಶಾಂತಮ್ಮ‌ ಪೋಷಕರ ಆರೋಪಿಸಿದ್ದಾರೆ. ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Yadgir Murder ಪರಿಶೀಲನೆ ಜಿಲ್ಲಾಸ್ಪತ್ರೆ