ಹೆಂಡತಿಯ ಸಾವಿನ ನಾಟಕ...!


04-12-2017 583

ಮಂಡ್ಯ: ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ಪ್ರಕರಣಕ್ಕೆ ಟಿಸ್ಟ್ ಸಿಕ್ಕಿದೆ. ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಳೆಂದಕೊಂಡಿದ್ದ ಗೃಹಿಣಿ ಸರಸ್ವತಿ ಜೀವಂತವಾಗಿದ್ದಾರೆ. ಮಂಡ್ಯದ ಕೆ.ಆರ್‌.ಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯಲ್ಲಿ ಎರಡು ದಿನಗಳ ಹಿಂದೆ ಸರಸ್ವತಿ  ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಶಂಕಿಸಲಾಗಿತ್ತು. ಅದಲ್ಲದೇ ಕೆರೆಯಲ್ಲಿ ಮುಳುಗಿದ ಗೃಹಿಣಿ ಶವಕ್ಕಾಗಿ ಪೊಲೀಸರು, ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದರು.

ಆದರೆ ಬೆಂಗಳೂರಿನ ಶಿವಾಜಿನಗರದ ಮನೆಯಲ್ಲಿದ್ದ ಸರಸ್ವತಿಯನ್ನು ಇಂದು, ತನ್ನ ಸಂಬಂಧಿಕರು ಊರಿಗೆ ಕರೆತಂದಿದ್ದಾರೆ. ಸತ್ತು ಹೋದಳೆಂದು ತಿಳಿದಿದ್ದ ಸರಸ್ವತಿ ಕುಟುಂಬಕ್ಕೆ ಸರಸ್ವತಿಯನ್ನು ಕಂಡು, ಅತ್ಯಂತ ಸಂತೋಷಗೊಂಡಿದ್ದಾರೆ. ಕೌಟುಂಬಿಕ ಕಲಹಕ್ಕೆ ಗಂಡನಿಗೆ ಬುದ್ಧಿ ಕಲಿಸಲು ನಾಟಕವಾಡಿ ಬೆಂಗಳೂರಿಗೆ ತೆರಳಿದ್ದಳು ಎಂದು ತಿಳಿದು ಬಂದಿದೆ. ಆದರೆ ಸರಸ್ವತಿ ನಾಟಕದಿಂದ ಎರಡು ದಿನಗಳ ಕಾಲ ಕೆರೆಯಲ್ಲಿ ಸರಸ್ವತಿ ಶವ ಹುಟಕಾಡ ನಡೆಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹೈರಾಣಾಗಿದ್ದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Mandya Suicide ಜೀವಂತ ಅಗ್ನಿಶಾಮಕ