ಭಾಷಣದಲ್ಲಿ ಗುಬ್ಬಿ ಶಾಸಕನ ಎಡವಟ್ಟು


04-12-2017 939

ತುಮಕೂರು: ಬಿಜೆಪಿಗೆ ಇನ್ನೇನು ಕೆಲಸವಿಲ್ಲ, ಮತೀಯ ಗಲಭೆ ಸೃಷ್ಟಿ ಮಾಡುತ್ತಿದ್ದಾರೆ, ಇದಕ್ಕೆ ಹುಬ್ಬಳ್ಳಿಯ ಈದ್ಗಾ ಮೈದಾನ ಸಾಕ್ಷಿ ಎಂದು ಬಿಜೆಪಿ ವಿರುದ್ಧ, ಜೆಡಿಎಸ್ ನ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.  ಕೊರಟಗೆರೆಯಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಷದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಕಾಶ್ಮೀರಿ ಗಲಾಟೆಯನ್ನು ಕೂಡ ನಿಭಾಯಿಸಲು ಆಗುತ್ತಿಲ್ಲ, ಆದರೆ ನಮ್ಮ ದೇವೇಗೌಡರು ಪ್ರಧಾನಿಯಾಗಿದ್ದರೆ ದೇಶಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದರು.

ಎಲ್ಲಾ ಕೆಲಸಗಳನ್ನು ಮಾಡಿರುವುದು ದೇವೇಗೌಡರ ನೇತೃತ್ವದ ಪಕ್ಷ, ಮೋದಿ ಸರ್ಕಾರ ಕಾರ್ಪೋರೇಟ್ ಸಾಲ ಮನ್ನಾ ಮಾಡಿದೆ ಆದರೆ ರೈತರ ಸಾಲ ಮನ್ನಾ ಮಾಡಿಲ್ಲ ಎಂದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಮತ್ತು ಬೇರೆ ಪಕ್ಷದವರೆಲ್ಲ ಕಳ್ಳರು, ನೀವು ಕರೆ ಮಾಡಿದರೆ ಸಾಕು ನಾವು ಓಡಿ ಬರ್ತೀವಿ, ಗುಲಾಮರಾಗಿ ನಿಮಗೆ ದುಡಿಯುತ್ತಿದ್ದೀವಿ, ಕಷ್ಟಕ್ಕೆ ಬರುವ ಹಾಗೂ ಮನೆಯೊಳಗೆ ಬಿಟ್ಟುಕೊಳ್ಳುವರಿಗೆ ಮತ ನೀಡಿ, ವೇಷ ಹಾಕಿಕೊಂಡು ಬಂದವರಿಗೆ ಮತ ನೀಡಬೇಡಿ, ಪ್ರತಿದಿನ ಕ್ಷೇತ್ರದಲ್ಲಿ ಇರುವವರಿಗೆ ಮತ ನೀಡಿ, ಕಳೆದ ಬಾರಿಯಂತೆ ಈ ಬಾರಿ ಅಂತಹವರಿಗೆ ಪಾಠ ಕಲಿಸಿ ಎಂದಿದ್ದಾರೆ.

ಪರೋಕ್ಷವಾಗಿ ಡಾ.ಜಿ ಪರಮೇಶ್ವರ್ ಗೆ ಟಾಂಗ್ ನೀಡಿದ ಗುಬ್ಬಿ ಶಾಸಕ, ನಿಮ್ಮ ಬಳಿಗೆ ಬರುತ್ತಿರುವ ಕಾಂಗ್ರೆಸ್ ವ್ಯಕ್ತಿ ವೈಟ್ ಕಾಲರ್ ವ್ಯಕ್ತಿ, ಆದರೆ ನಾವು ಹುಚ್ಚುನಾಯಿಗಳು ಇದ್ದಹಾಗೆ, ಅವರ ರೀತಿ ನಾವು ಅಲ್ಲ, ಇಳಿವಯಸ್ಸಿನಲ್ಲೂ ಗೌಡ್ರು ಹುಚ್ಚು ನಾಯಿಯಂತೆ ತಿರುಗುತ್ತಾರೆ, ಇದು ನಿಮಗಾಗಿ ಎಂದು, ಭಾಷಣದ ಭರಾಟೆಯಲ್ಲಿ ದೇವೇಗೌಡರನ್ನು ಹುಚ್ಚುನಾಯಿಗೆ ಹೋಲಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

JDS tumkur ಕೊರಟಗೆರೆ ಕಾರ್ಪೋರೇಟ್