ಬರಾಕ್ ಒಬಾಮ, ಚಪಾತಿ ಮತ್ತು ದಾಲ್…


01-12-2017 1076

ಈ ವ್ಯಕ್ತಿ 8 ವರ್ಷಗಳ ಕಾಲ ವಿಶ್ವದ ದೊಡ್ಣಣ್ಣ ಎಂದು ಕರೆಸಿಕೊಳ್ಳುವ ದೇಶದ ಅಧ್ಯಕ್ಷರಾಗಿದ್ದರು, ಒಳ್ಳೆಯ ಆಡಳಿತವನ್ನೂ ನೀಡಿದರು, ಜಗತ್ತಿನಲ್ಲಿ ಶಾಂತಿ ಕಾಪಾಡುವ ಸಲುವಾಗಿ ಮಾಡಿದ ಪ್ರಯತ್ನಗಳಿಗಾಗಿ ನೊಬೆಲ್ ಬಹುಮಾನವನ್ನೂ ಗಳಿಸಿದರು. ಇಷ್ಟೆಲ್ಲ ಸಾಧನೆ ಮಾಡಿರೋ ಈ ವ್ಯಕ್ತಿಗೆ, ಚಪಾತಿ ಮಾಡೋದು ಮಾತ್ರ ಭಾರಿ ಕಷ್ಟದ ಕೆಲಸವಂತೆ. ಹೌದು, ಸ್ವತಃ ಬರಾಕ್ ಒಬಾಮ ಅವರೇ ಈ ಮಾತನ್ನು ಹೇಳಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಲೀಡರ್‌ಶಿಪ್ ಸಮ್ಮಿಟ್‌ ಕಾರ್ಯಕ್ರಮದ ವೇಳೆ, ಪತ್ರಕರ್ತ ಕರಣ್ ಥಾಪರ್ ಜೊತೆ ಮಾತನಾಡುತ್ತಿದ್ದ ಒಬಾಮ, ‘ಚಪಾತಿ ಮಾಡುವುದು ನನಗೆ ಕಷ್ಟದ ಕೆಲಸ, ಆದರೆ ದಾಲ್ ಮಾಡುವುದು ಮಾತ್ರ ತುಂಬಾ ಚೆನ್ನಾಗಿ ಗೊತ್ತು’ ಎಂದು ಹೇಳಿದರು. ಒಬಾಮ ವಿದ್ಯಾರ್ಥಿಯಾಗಿದ್ದಾಗ ಅವರ ಜೊತೆಗಿದ್ದ ಸ್ನೇಹಿತ, ದಾಲ್ ಎಂದು ಪ್ರಖ್ಯಾತವಾಗಿರುವ ಹೆಸರುಬೇಳೆ ತೊವೆ ತಯಾರಿಸುವುದನ್ನು ಕಲಿಸಿಕೊಟ್ಟಿದ್ದನಂತೆ. ಅದು ಸರಿ, ಆದರೆ, ಒಬಾಮ ಅವರನ್ನು ಪ್ರೀತಿಯಿಂದ ಬರಾಕ್ ಎಂದೇ ಕರೆಯುವ ಗೆಳೆಯ, ಭಾರತದ ಪ್ರಧಾನಿ ಮೋದಿ ಸಾಹೇಬರು, ನಿಮಗೆ ಏನನ್ನಾದರೂ ಕಲಿಸಿಕೊಟ್ಟಿದ್ದಾರೆಯೇ? ಎಂಬ ನಮ್ಮ ಪ್ರಶ್ನೆ ಅವರ ಕಿವಿಗೆ ಬಿದ್ದಂತಿಲ್ಲ ಬಿಡಿ.


ಒಂದು ಕಮೆಂಟನ್ನು ಬಿಡಿ